alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶದಲ್ಲಿ ಅತಂತ್ರರಾಗಿದ್ದ ಹಾಕಿ ತಂಡಕ್ಕೆ ನೆರವು ನೀಡಿದೆ ಸಿಖ್ ಸಮುದಾಯ

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಅತಂತ್ರರಾಗಿದ್ದ ಭಾರತದ ಹಾಕಿ ಆಟಗಾರ್ತಿಯರಿಗೆ ಅಲ್ಲಿನ ಸಿಖ್ ಸಮುದಾಯ ನೆರವಿನ ಹಸ್ತ ನೀಡಿದೆ. ದೇಶದ ಪರವಾಗಿ ಆಡಲು ತೆರಳಿದ್ದ ಕಿರಿಯರ ತಂಡಕ್ಕೆ ಆಸ್ಟ್ರೇಲಿಯಾದಲ್ಲಿರೋ ಭಾರತದ ರಾಯಭಾರ ಕಚೇರಿ ಕೂಡ ಸಹಾಯ ಮಾಡಲಿಲ್ಲ.

ಸಾರಿಗೆ ವ್ಯವಸ್ಥೆ, ವಸತಿ ಇಲ್ಲದೆ ಅಕ್ಷರಶಃ ಕಂಗಾಲಾಗಿದ್ದ ಆಟಗಾರ್ತಿಯರು ನಡುರಸ್ತೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ರು. ಅದನ್ನು ನೋಡಿದ ಟ್ಯಾಕ್ಸಿ ಚಾಲಕನೊಬ್ಬ ನೆರವಿಗೆ ಬಂದಿದ್ದಾನೆ. ಆತ ಸಿಖ್ಖನಾಗಿದ್ದು, ಅಡಿಲೇಡ್ ನ ಸಿಖ್ ಸಮುದಾಯಕ್ಕೆ ವಿಷಯ ತಿಳಿಸಿದ್ದ. ಅವರು ಗುರುದ್ವಾರದಿಂದ ಹಾಕಿ ಆಟಗಾರ್ತಿಯರಿಗೆ ಊಟ ಮತ್ತು ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ.

ಪಂದ್ಯ ನಡೆಯಬೇಕಿದ್ದ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಕೂಡ ಮಾಡಿಕೊಟ್ಟಿದ್ದಾರೆ. ಆಸೀಸ್ ಗೆ ತೆರಳಿದ್ದ ಪ್ರತಿ ಆಟಗಾರ್ತಿಯರ ಹೆಸರಲ್ಲಿ ಸರ್ಕಾರದಿಂದ ಸ್ಕೂಲ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ತಲಾ 2.5 ಲಕ್ಷ ರೂಪಾಯಿ ಪಡೆದಿದೆ. ಆದ್ರೆ ತಂಡಕ್ಕೆ ಯಾವ ಸೌಲಭ್ಯವನ್ನೂ ಕಲ್ಪಿಸಿಕೊಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...