alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಹರಕೆ ತೀರಿಸಿದ ಬೆಳ್ಳಿತಾರೆ ಸಿಂಧು

sind

ಹೈದರಾಬಾದ್: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ದೇವರ ಹರಕೆಯನ್ನು ತೀರಿಸಿದ್ದಾರೆ. ಸೀರೆಯುಟ್ಟು ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ತೆರಳಿ ಇಷ್ಟಾರ್ಥ ಸಿದ್ಧಿಗೆ ಹರಕೆ ತೀರಿಸಿದ್ದಾರೆ.

ಹೈದರಾಬಾದ್ ಲಾಲ್ ದರ್ವಾಜ್ ನಗರದಲ್ಲಿರುವ ಸಿಂಹವಾಹಿನಿ ಮಹಾಂಕಾಳಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ನಡೆದುಕೊಂಡು ಬಂದ ಅವರು, ಹರಕೆ ಸಲ್ಲಿಸಿ, ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ದೇವಾಲಯಕ್ಕೆ ಸಿಂಧು ಪ್ರತಿ ವರ್ಷವೂ ಭೇಟಿ ಕೊಡುತ್ತಾರೆ. ಈ ಬಾರಿ ಒಲಿಂಪಿಕ್ಸ್ ಗೆ ಹೋಗುವ ಮೊದಲು ಹರಕೆ ಹೊತ್ತಿದ್ದು, ಪದಕ ಗಳಿಸಿದ ಹಿನ್ನಲೆಯಲ್ಲಿ ಕಾಲ್ನಡಿಗೆಯಲ್ಲಿ  ತೆರಳಿ ಪೂಜೆ ಸಲ್ಲಿಸಿ, ಹರಕೆ ತೀರಿಸಿದ್ದಾರೆ.

ರಿಯೋ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ ಸಿಂಧು ದಾಖಲೆ ಬರೆದಿದ್ದಾರೆ. ಪದಕ ಗಳಿಸಿದರೆ ಪೂಜೆ ಸಲ್ಲಿಸುವುದಾಗಿ ಅವರು ಹರಕೆ ಹೊತ್ತಿದ್ದು, ಅದರಂತೆ ಹರಕೆಯನ್ನು ತೀರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...