alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಗೂಲಿ ಬದುಕಿ ಬಂದಿದ್ದೇ ಒಂದು ಪವಾಡ…!

533602-sourav-ganguly-gun1996ರಲ್ಲಿ ಮೊದಲ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ಹೋದಾಗಲೇ ಸೌರವ್ ಗಂಗೂಲಿ ತಮ್ಮ ಬ್ಯಾಟ್ ಮೂಲಕ ‘ದಾದಾಗಿರಿ’ ತೋರಿಸಿದ್ರು. ಆದ್ರೆ ಆ ಸರಣಿ ಸೌರವ್ ಪಾಲಿನ ಕೊನೆಯ ಸರಣಿಯಾಗುವುದರಲ್ಲಿತ್ತು, ಗಂಗೂಲಿ ಅಲ್ಲೇ ಸಾವಿನ ಮನೆ ಸೇರುವುದರಲ್ಲಿದ್ದರು.

ಲಾರ್ಡ್ಸ್ ಹಾಗೂ ಟ್ರೆಂಟ್ ಬ್ರಿಡ್ಜ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ್ದ ದಾದಾಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಕ್ಕಾ ಆಗಿತ್ತು. ಅಂಡರ್ ಗ್ರೌಂಡ್ ಟ್ಯೂಬ್ ನಲ್ಲಿ ನವಜೋತ್ ಸಿಂಗ್ ಸಿದ್ಧು ಜೊತೆ ಹೋಗ್ತಾ ಇದ್ದ ಗಂಗೂಲಿಯನ್ನು ಅಡ್ಡಗಟ್ಟಿದ ಕೆಲವು ಯುವಕರು ಹಣೆಗೆ ಪಿಸ್ತೂಲ್ ಇಟ್ಟಿದ್ರು.

ಇಬ್ಬರು ಹುಡುಗರು, ಮೂವರು ಯುವತಿಯರ ಗ್ಯಾಂಗ್ ಅದು, ಎಲ್ಲರೂ ಕುಡಿದು ಟೈಟಾಗಿದ್ರು. ಅವರಿಗೆ ಎದುರಾಗಿ ಗಂಗೂಲಿ ಹಾಗೂ ಸಿದ್ದು ಕುಳಿತಿದ್ರು. ಆ ಗ್ಯಾಂಗ್ ನಲ್ಲಿ ಒಬ್ಬನ ಗಮನ ಇವರ ಮೇಲಿತ್ತು. ಇದ್ದಕ್ಕಿದ್ದಂತೆ ಕುಳಿತಲ್ಲಿಂದ ಎದ್ದ ಒಬ್ಬ ಜಗಳಕ್ಕೆ ನಿಂತಿದ್ದ, ಸುಮ್ಮನಿದ್ದುಬಿಡೋಣ ಅಂದ್ರೂ ಸಿದ್ದು ಕೇಳಲಿಲ್ಲ, ಅವರೂ ವಾಗ್ವಾದಕ್ಕೆ ನಿಂತ್ರು.

 

ಆಗ ಗಂಗೂಲಿ ಕೈಯಲ್ಲಿದ್ದ ಗ್ಲಾಸ್ ಕೆಳಕ್ಕೆಸೆದು ಆದದ್ದಾಗ್ಲಿ ನೋಡೇ ಬಿಡೋಣ ಅಂದ್ಕೊಂಡು ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ರು. ಅಲ್ಲೇ ಎರಡೂ ಗುಂಪಿನ ಮಧ್ಯೆ ಹೊಡೆದಾಟವೂ ನಡೆದುಹೋಯ್ತು, ಕೊನೆಗೆ ಸಿದ್ಧು, ಗಂಗೂಲಿ ಇಬ್ರೂ ಯಾವುದೋ ಸ್ಟೇಶನ್ ನಲ್ಲಿ ಇಳಿದ್ರು. ಆಗ ಗಂಗೂಲಿ ದುಷ್ಕರ್ಮಿಯನ್ನು ಕೆಳಕ್ಕೆ ತಳ್ಳಿದ್ರು. ಮೇಲೆದ್ದು ಬಂದ ಆತ ಗಂಗೂಲಿ ನೆತ್ತಿ ಮೇಲೆ ಗನ್ ಇಟ್ಟಿದ್ದ, ಇನ್ನೇನು ತನ್ನ ಕಥೆ ಮುಗಿದೇ ಹೋಯ್ತು ಅಂತಾನೇ ದಾದಾ ಅಂದುಕೊಂಡಿದ್ರು.

ಅದೇ ಗ್ಯಾಂಗಿನಲ್ಲಿ ಕಟ್ಟುಮಸ್ತಾಗಿದ್ದ ಯುವತಿ ಕೂಡಲೇ ಅವನನ್ನು ಪಕ್ಕಕ್ಕೆ ತಳ್ಳಿದ್ಲು, ಅವಳ ಪರ್ಸನಾಲಿಟಿ ನೋಡಿದ ಆತ ಮತ್ತೆ ಗನ್ ಎತ್ತುವ ಸಾಹಸ ಮಾಡಲಿಲ್ಲ. ಅದೃಷ್ಟವಶಾತ್ ಪ್ರಾಣ ಉಳಿಸಿಕೊಂಡ ಗಂಗೂಲಿ ಆ ಯುವತಿಗೆ ಮನಸ್ಸಿನಲ್ಲೇ ಧನ್ಯವಾದ ಅರ್ಪಿಸಿ ಅಲ್ಲಿಂದ ಹೊರಟ್ರು. ‘ಕ್ರಿಕೆಟ್ ಟೇಲ್ಸ್’ ಎಂಬ ಪುಸ್ತಕದಲ್ಲಿ ಈ ಘಟನೆ ಬಗ್ಗೆ ಬರೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...