alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಸಚಿನ್ ನಾಯಕತ್ವ ಬಿಟ್ಟಿದ್ದ ಕಾರಣ

sachin-tendulkar

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಾಡಿದ ಸಾಧನೆ ಒಂದೆರಡಲ್ಲ. ಸಚಿನ್ ತೆಂಡೂಲ್ಕರ್ ಆಟಕ್ಕಿಳಿದರೆ, ಮೈದಾನದಲ್ಲಿ ರನ್ ಹೊಳೆ ಗ್ಯಾರಂಟಿ. ಅಂತಹ ಸಚಿನ್ ತಂಡದ ನಾಯಕನಾಗಿ ಯಶಸ್ವಿಯಾಗಲಿಲ್ಲ ಎಂಬ ಮಾತುಗಳು ಆಗ ಕೇಳಿಬಂದಿದ್ದವು.

ಸಚಿನ್ ತೆಂಡೂಲ್ಕರ್ ನಾಯಕನಾಗಿ ಯಶಸ್ವಿಯಾಗಬಹುದಾಗಿದ್ದರೂ, ಅವರು ನಾಯಕತ್ವವನ್ನು ಬಿಟ್ಟುಕೊಟ್ಟಿದ್ದರು. ಅವರು ನಾಯಕತ್ವ ಬಿಟ್ಟು ಕೊಡಲು ಕಾರಣ ಮಹಮ್ಮದ್ ಅಜರುದ್ದೀನ್ ಅವರಂತೆ. ಅಜರುದ್ದೀನ್ ಜೀವನ ಆಧರಿಸಿದ ‘ಅಜರ್’ ಸಿನಿಮಾ ತೆರೆಗೆ ಬಂದಿದ್ದು, ನಿರೀಕ್ಷಿತ ಓಪನಿಂಗ್ ಸಿಕ್ಕಿಲ್ಲ. ಹಿಂದೆ ಅಜರ್ ಕಾರಣಾಂತರದಿಂದ ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡು ಕ್ರಿಕೆಟ್ ನಿಂದ ಉಳಿಯುವಂತಾಗಿತ್ತು.

ಇದೆಲ್ಲದರ ನಂತರ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ, ಹೊಸತೊಂದು ಬಾಂಬ್ ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ನಾಯಕತ್ವ ತ್ಯಜಿಸಲು ಅಜರುದ್ದೀನ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ.

ಅಜರ್ ಕಾರಣ ಎಂಬುದಕ್ಕೆ ನಾನೇ ಸಾಕ್ಷಿ ಎಂದು ಕಾಂಬ್ಳಿ ಹೇಳಿದ್ದಾರೆ. ಹಿಂದೆಯೂ ಈ ಬಗ್ಗೆ ಮಾತು ಕೇಳಿಬಂದಿದ್ದವಾದರೂ, ಸ್ಪಷ್ಟತೆ ಇರಲಿಲ್ಲ. ಇದೀಗ ವಿನೋದ್ ಕಾಂಬ್ಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆದರೆ, ಸಚಿನ್ ಆಗಲಿ, ಅಜರ್ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...