alex Certify
ಕನ್ನಡ ದುನಿಯಾ       Mobile App
       

Kannada Duniya

ಗಳಿಕೆಯಲ್ಲಿ ಧೋನಿ, ಕೊಹ್ಲಿಯನ್ನೇ ಹಿಂದಿಕ್ಕಿದ ಕ್ರೀಡಾಪಟು

yogeshwar-dutt_reuters_m

ನವದೆಹಲಿ: ಭಾರತದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರ ಎನ್ನುವಂತಾಗಿದೆ. ದೇಶದಲ್ಲಿ ಕ್ರಿಕೆಟ್ ಆಟಕ್ಕೆ ಸಿಗುವಷ್ಟು ಪ್ರೋತ್ಸಾಹ ಬೇರೆ ಆಟಕ್ಕೆ ಸಿಗುವುದಿಲ್ಲ. ಅಲ್ಲದೇ, ಕ್ರಿಕೆಟ್ ಆಟಗಾರರಿಗೆ ಸಿಗುವ ಮನ್ನಣೆಗೆ ಹೋಲಿಸಿದರೆ ಬೇರೆ ಕ್ರೀಡಾಪಟುಗಳು ಲೆಕ್ಕಕ್ಕೆ ಇಲ್ಲ ಎನ್ನಬಹುದು.

ಕ್ರೀಡೆಯಲ್ಲಿ ಕ್ರಿಕೆಟ್ ಗೆ ಸಿಗುವಷ್ಟು ಮಾನ್ಯತೆ, ಗಳಿಕೆ ಬೇರೆಯವುಗಳಿಗೆ ಸಿಗುವುದಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಕ್ರೀಡಾಪಟು ಗಳಿಕೆಯಲ್ಲಿ ಖ್ಯಾತ ಕ್ರಿಕೆಟ್ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರನ್ನೇ ಹಿಂದಿಕ್ಕಿದ್ದಾರೆ. ಭಾರತದ ಪ್ರಮುಖ ಕುಸ್ತಿ ಆಟಗಾರರಾಗಿರುವ ಯೋಗೇಶ್ವರ್ ದತ್ ಅವರು ಪ್ರತಿ ನಿಮಿಷದ ಗಳಿಕೆಯಲ್ಲಿ ಧೋನಿ ಹಾಗೂ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ನಿಮಿಷದ ಗಳಿಕೆಯಲ್ಲಿ ಯೋಗೇಶ್ವರ್ ದತ್ ಮೊದಲಿಗರಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರೊಫೆಷನಲ್ ರೆಸ್ಲಿಂಗ್ ಲೀಗ್ ನಲ್ಲಿ ಯೋಗೇಶ್ವರ್ ದತ್ ಪ್ರತಿನಿಮಿಷಕ್ಕೆ ಸರಾಸರಿಯಾಗಿ 1.65 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ. ಪ್ರತಿ ನಿಮಿಷದ ವೇತನ ಗಳಿಕೆಯಲ್ಲಿ ಯೋಗೇಶ್ವರ್ ದತ್ ಅವರು ಕ್ರಿಕೆಟ್ ಸ್ಟಾರ್ ಆಟಗಾರರಿಗಿಂತ ಹೆಚ್ಚು ಗಳಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...