alex Certify
ಕನ್ನಡ ದುನಿಯಾ       Mobile App
       

Kannada Duniya

ಇವ್ರೇ ನೋಡಿ ವಿಶ್ವದ ‘ವರ್ಸ್ಟ್ ಬ್ಯಾಟ್ಸ್ ಮನ್’

chris-martin-234ಜನಪ್ರಿಯ ಆಟ ಕ್ರಿಕೆಟ್ ನಲ್ಲಿ ಸಾಮಾನ್ಯವಾಗಿ ಅತ್ಯಧಿಕ ರನ್ ಗಳಿಸಿರುವವರು, ಅತ್ಯಧಿಕ ವಿಕೆಟ್ ಪಡೆದವರು, ಅತ್ಯುತ್ತಮವಾಗಿ ಕ್ಯಾಚ್ ಹಿಡಿದವರು ಇಂತವರೇ ಬಗ್ಗೆಯೇ ಚರ್ಚೆ ನಡೆಯುತ್ತದೆ. ಕಳಪೆ ಆಟವಾಡಿದ ಸಂದರ್ಭಗಳಲ್ಲಿ ಅಂತವರ ಬಗ್ಗೆ ಟೀಕೆಯೂ ಕೇಳಿ ಬರುತ್ತದೆ. ಆದರೆ ಒಬ್ಬರು ಮಾತ್ರ ವಿಶ್ವದ ‘ವರ್ಸ್ಟ್ ಬ್ಯಾಟ್ಟ್ ಮನ್’ ಎಂಬ ಪಟ್ಟವನ್ನಲಂಕರಿಸಿದ್ದಾರೆ ಗೊತ್ತಾ.

ನ್ಯೂಜಿಲ್ಯಾಂಡಿನ ಮಾಜಿ ಕ್ರಿಕೆಟಿಗ 41 ವರ್ಷದ ಕ್ರಿಸ್ ಮಾರ್ಟಿನ್ ಗೆ ಈ ಪಟ್ಟ ದೊರೆತಿದ್ದು, ಅವರು ತಾವಾಡಿರುವ 104 ಇನ್ನಿಂಗ್ಸ್ ಗಳಿಂದ ಕೇವಲ 123 ರನ್ ಗಳಿಸಿದ್ದಾರೆ. 2.36 ರನ್ ಸರಾಸರಿ ಹೊಂದಿರುವ ಕ್ರಿಸ್ ಮಾರ್ಟಿನ್, 36 ಇನ್ನಿಂಗ್ಸ್ ಗಳಲ್ಲಿ ಖಾತೆಯನ್ನೇ ತೆರೆದಿಲ್ಲ. ಬಾಂಗ್ಲಾದೇಶದ ವಿರುದ್ದ ಅವರು ಗಳಿಸಿದ 12 ರನ್ ಅತ್ಯಧಿಕ ಸ್ಕೋರ್ ಆಗಿದೆ.

ಆದರೆ ಬೌಲಿಂಗ್ ನಲ್ಲಿ ಕ್ರಿಸ್ ಮಾರ್ಟಿನ್ ಉತ್ತಮ ಸಾಧನೆ ಮಾಡಿದ್ದು, 71 ಪಂದ್ಯಗಳಿಂದ 233 ವಿಕೆಟ್ ಕಬಳಿಸಿದ್ದಾರೆ. ಬ್ಯಾಟಿಂಗ್ ವೈಫಲ್ಯದ ಕಾರಣಕ್ಕಾಗಿ ಅವರಿಗೆ ‘ವಾಕಿಂಗ್ ವಿಕೆಟ್’ ಎಂದು ತಮಾಷೆಯಾಗಿ ಕರೆಯಲಾಗುತ್ತಿತ್ತು. 2000 ರಲ್ಲಿ ನಡೆದ ಸೌತ್ ಅಫ್ರಿಕಾ ವಿರುದ್ದದ ಪಂದ್ಯದಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಕ್ರಿಸ್ ಮಾರ್ಟಿನ್, 2013 ರಲ್ಲಿ ಅದೇ ಸೌತ್ ಅಫ್ರಿಕಾ ತಂಡದ ವಿರುದ್ದ ಪಂದ್ಯವಾಡಿದ ಬಳಿಕ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...