alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯದ ಬಳಿಕ ಮೈದಾನದಲ್ಲೇ ಕಣ್ಣೀರಿಟ್ಟ ಕ್ರಿಕೆಟಿಗ…!

ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಏಶ್ಯಾ ಕಪ್ ನಲ್ಲಿ ಅಚ್ಚರಿಯ ಫಲಿತಾಂಶಗಳು ಬರುತ್ತಿವೆ. ಹಾಂಕಾಂಗ್ ಎಂಬ ಕ್ರಿಕೆಟ್ ಶಿಶು ಗೆಲುವು ಬಿಟ್ಟು ಕೊಡುವ ಮೊದಲು ಟೀಂ ಇಂಡಿಯಾದ ಬೆವರಿಳಿಸಿದ್ದು, ಇಡೀ ಭಾರತದ ಕ್ರಿಕೆಟ್ ಪ್ರೇಮಿಗಳನ್ನು ಟಿ.ವಿ. ಮುಂದೆ ನಿಲ್ಲಿಸಿದ್ದು ಗೊತ್ತೇ ಇದೆ. ಆ ಬಳಿಕ ಕ್ರಿಕೆಟ್ ನಲ್ಲಿ ಬಲಿಷ್ಠ ತಂಡಗಳಿಗೆ ಕಬ್ಬಿಣದ ಕಡಲೆಯಾಗುತ್ತಿರುವ ಬಾಂಗ್ಲಾದೇಶಕ್ಕೆ ಅಫ್ಘಾನಿಸ್ತಾನ ನೀರು ಕುಡಿಸಿತ್ತು.

ಅಂತಹದ್ದೇ ಮತ್ತೊಂದು ಫಲಿತಾಂಶ ಶುಕ್ರವಾರ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲೂ ಈ ಫಲಿತಾಂಶ ಪುನರಾವರ್ತನೆಯಾಗುವ ಎಲ್ಲಾ ಲಕ್ಷಣಗಳು ದಟ್ಟವಾಗಿದ್ದವು. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿ ಹೊರಟ ಪಾಕಿಸ್ತಾನಕ್ಕೆ ಕೊನೆಯ ಓವರ್ ಗಳಲ್ಲಿ ಸೋಲಿನ ವಾಸನೆ ಬಡಿದಿತ್ತು. ಕರಾರು ವಾಕ್ ಬೌಲಿಂಗ್ ಸಂಘಟಿಸಿದ ಅಫ್ಘಾನ್ ಬೌಲರ್ ಗಳು ಪಾಕಿಗಳನ್ನು ರನ್ ರನ್ನಿಗೂ ಒದ್ದಾಡುವಂತೆ ಮಾಡಿದ್ದರು.

ಆದರೆ ಅನುಭವೀ ಶೊಯೇಬ್ ಮಲಿಕ್(51) ಆಕರ್ಷಕ ಅರ್ಧ ಶತಕದ ನೆರವಿನಿಂದ ಪಾಕ್ ತಂಡ ಕೇವಲ 3 ಎಸೆತ ಬಾಕಿ ಇರುವಂತೆ ಗುರಿ ತಲುಪಿತು. ಗೆದ್ದದ್ದು ಪಾಕ್ ಆದರೂ ಮನಗೆದ್ದದ್ದು ಅಫ್ಘಾನ್ ಹುಡುಗರ ಛಲದಾಟ. ಕೊನೆ ಹಂತದಲ್ಲಿ ಪಂದ್ಯ ಕೈ ತಪ್ಪಿ ಹೋದದ್ದಕ್ಕೆ ಅಫ್ಘಾನ್ ಬೌಲರ್ ಅಫ್ತನ್ ಅಲಾಮ್ ಕಣ್ಣಾಲಿಗಳು ಒದ್ದೆಯಾಗಿತ್ತು. ಆಗ ಆತನ ಬಳಿ ಹೋದ ಶೊಯೇಬ್ ಮಲಿಕ್ ಆತನನ್ನು ಸಂತೈಸಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಶೊಯೇಬ್ ವರ್ತನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದ ಅವರು ನಿಜವಾಗಿಯೂ ಮ್ಯಾನ್ ಆಫ್ ದಿ ಮ್ಯಾಚ್ ನಂತೆ ಗೋಚರಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...