alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗದಲ್ಲಿ ರಣಜಿ ಕ್ರಿಕೆಟ್ ಕಲರವ

ಶಿವಮೊಗ್ಗ: ಮೈಸೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಭರ್ಜರಿ ಜಯಗಳಿಸಿ, ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಕರ್ನಾಟಕ ತಂಡ ಅಕ್ಟೋಬರ್ 24 ರಿಂದ ಶಿವಮೊಗ್ಗದಲ್ಲಿ 2 ನೇ ಪಂದ್ಯವನ್ನಾಡಲಿದೆ.

ಶಿವಮೊಗ್ಗದ ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(ಕೆ.ಎಸ್.ಸಿ.ಎ.) ಮೈದಾನದಲ್ಲಿ ಹೈದರಾಬಾದ್ ಮತ್ತು ಕರ್ನಾಟಕ ತಂಡಗಳ ನಡುವೆ ರಣಜಿ ಪಂದ್ಯ ನಡೆಯಲಿದೆ.

ಶಿವಮೊಗ್ಗದ ಜೆ.ಎನ್.ಎನ್.ಸಿ.ಇ. ಮೈದಾನದಲ್ಲಿ 2011 ರಲ್ಲಿ ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ರಣಜಿ ಪಂದ್ಯ ನಡೆದಿತ್ತು.

ಕೆ.ಎಸ್.ಸಿ.ಎ. ಮೈದಾನ ನಿರ್ಮಾಣವಾದ ಬಳಿಕ ಮೊದಲ ಪಂದ್ಯ ನಡೆಯುತ್ತಿದ್ದು, ಅಕ್ಟೋಬರ್ 24 ರಿಂದ 27 ರ ವರೆಗೆ ಕರ್ನಾಟಕ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

ಕರ್ನಾಟಕ ತಂಡಕ್ಕೆ ವಿನಯ್ ಕುಮಾರ್, ಹೈದರಾಬಾದ್ ತಂಡಕ್ಕೆ ಅಂಬಾಟಿ ರಾಯುಡು ನಾಯಕರಾಗಿದ್ದಾರೆ. ಅಕ್ಟೋಬರ್ 21 ರಂದು ಎರಡೂ ತಂಡಗಳ ಆಟಗಾರರು ಶಿವಮೊಗ್ಗಕ್ಕೆ ಆಗಮಿಸಿ ಮರುದಿನದಿಂದ ತರಬೇತಿ ನಡೆಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...