alex Certify
ಕನ್ನಡ ದುನಿಯಾ       Mobile App
       

Kannada Duniya

ರಣಜಿ: ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಗೆಲುವು

ಶಿವಮೊಗ್ಗ: ಇಲ್ಲಿನ ಕೆ.ಎಸ್.ಸಿ.ಎ. ಮೈದಾನದಲ್ಲಿ ಹೈದರಾಬಾದ್ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ 59 ರನ್ ಅಂತರದಿಂದ ಗೆಲುವು ಕಂಡಿದೆ.

ಗೆಲುವಿಗೆ 380 ರನ್ ಗುರಿ ಪಡೆದಿದ್ದ ಹೈದರಾಬಾದ್ ತಂಡ 320 ರನ್ ಗಳಿಗೆ ಆಲ್ ಔಟ್ ಆಗಿದೆ. ಹೈದರಾಬಾದ್ ಪರವಾಗಿ ಸಂದೀಪ್ ರೆಡ್ಡಿ 80, ಆಶೀಶ್ ರೆಡ್ಡಿ ಅಜೇಯ 57, ತನ್ಮಯ್ ಅಗರ್ ವಾಲ್ 44 ರನ್ ಗಳಿಸಿ ಗಮನಸೆಳೆದರು.

ಕರ್ನಾಟಕದ ಪರವಾಗಿ ಶ್ರೇಯಸ್ ಗೋಪಾಲ್ 4, ಗೌತಮ್ 3, ವಿನಯ್ ಕುಮಾರ್, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಪಡೆದರು.

ಪಂದ್ಯದಲ್ಲಿ ಶತಕ ಸಿಡಿಸಿದ ಕರುಣ್ ನಾಯರ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪರುಸ್ಕೃತರಾದರು. ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಅಸ್ಸಾಂ ತಂಡವನ್ನು ಮಣಿಸಿತ್ತು.

ಸ್ಕೋರ್ ವಿವರ:

ಕರ್ನಾಟಕ -ಮೊದಲ ಇನ್ನಿಂಗ್ಸ್ 183, 2 ನೇ ಇನ್ನಿಂಗ್ಸ್ 332

ಹೈದರಾಬಾದ್ –ಮೊದಲ ಇನ್ನಿಂಗ್ಸ್ 136, 2 ನೇ ಇನ್ನಿಂಗ್ಸ್ 320

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...