alex Certify
ಕನ್ನಡ ದುನಿಯಾ       Mobile App
       

Kannada Duniya

ರಜೆಯಲ್ಲಿರುವ ಧವನ್ ಏನು ಮಾಡ್ತಿದ್ದಾರೆ ಗೊತ್ತಾ?

ಟೀಂ ಇಂಡಿಯಾ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. 2ನೇ ಪಂದ್ಯದಿಂದ ಹೊರಗುಳಿದಿರುವ ಶಿಖರ್ ಧವನ್ ಸಹೋದರಿ ಮದುವೆ ಎಂಜಾಯ್ ಮಾಡ್ತಿದ್ದಾರೆ.

ಎರಡನೇ ಪಂದ್ಯದಿಂದ ಶಿಖರ್ ಧವನ್ ಯಾಕೆ ಹೊರಗುಳಿದಿದ್ದಾರೆನ್ನುವ ಬಗ್ಗೆ ಸ್ಪಷ್ಟ ಕಾರಣ ತಿಳಿದಿರಲಿಲ್ಲ. ವೈಯಕ್ತಿಕ ಕಾರಣಕ್ಕೆ ಅವರು ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆಂದು ಬಿಸಿಸಿಐ ಹೇಳಿತ್ತು. ಏನು ಕಾರಣ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲ ಅಭಿಮಾನಿಗಳಿಗೂ ಇತ್ತು. ಅಭಿಮಾನಿಗಳ ಕುತೂಹಲಕ್ಕೆ ಧವನ್ ತೆರೆ ಎಳೆದಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿ ಉತ್ತರ ನೀಡಿದ್ದಾರೆ.

ಗುರುವಾರ ಧವನ್ ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋವೊಂದನ್ನು ಹಾಕಿದ್ದಾರೆ. ಸೆಲ್ಫಿಯಲ್ಲಿ ಧವನ್ ಪತ್ನಿ ಹಾಗೂ ಸಹೋದರಿಯಿದ್ದಾರೆ. ಗುರುವಾರ ಸಹೋದರಿ ಮದುವೆ ಸಮಾರಂಭ ನಡೆದಿದೆ. ಮದುವೆಗಾಗಿ ರಜಾ ತೆಗೆದುಕೊಂಡಿರುವ ಧವನ್ ಸಹೋದರಿ ವಿವಾಹದಲ್ಲಿ ಬ್ಯುಸಿಯಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...