alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಗಂಭೀರ್, ಶಿಖರ್ ಟ್ವಿಟರ್ ಖಾತೆ ಹ್ಯಾಕ್…!

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಶಿಖರ್ ಧವನ್ ಹಾಗೂ ಗೌತಮ್ ಗಂಭೀರ್ ಅವರ ಟ್ವಿಟರ್ ಖಾತೆಗಳು ಹ್ಯಾಕ್ ಆಗಿರುವ ಬಗ್ಗೆ ಆಟಗಾರರು ಖಚಿತಪಡಿಸಿದ್ದಾರೆ.

ಹ್ಯಾಕರ್ಸ್ ಗೌತಮ್ ಗಂಭೀರ್ ಟ್ವಿಟರ್ ಖಾತೆಯಿಂದ ಬಾಲಿವುಟ್ ನಟಿಯೊಬ್ಬರು ಹಾಗೂ ಮಾಜಿ ಆಟಗಾರರಾದ ಮೈಕಲ್ ಕ್ಲಾಕ್, ಗಿಲ್‍ಕ್ರಿಸ್ಟ್, ಕುಮಾರ್ ಸಂಗಕರ ಅವರಿಗೆ ಟ್ವೀಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಗೌತಿ, ತಮ್ಮ ಖಾತೆಯಿಂದ ಬಂದ ಸಂದೇಶವನ್ನು ಗಂಭೀರವಾಗಿ ಪರಿಗಣಿಸದಂತೆ ಸ್ನೇಹಿತರಿಗೆ ಮನವಿ ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆದ ಬಗ್ಗೆ ಟ್ವಿಟರ್ ನಲ್ಲಿ ಗಂಭೀರ್ ಮಾಹಿತಿ ನೀಡಿದ್ದರೆ. ಅಲ್ಲದೆ ಟ್ವಿಟ್ಟರ್ ಸಂಸ್ಥೆಗೂ ಮಾಹಿತಿ ನೀಡಿ ಹ್ಯಾಕರ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡ್ತಾ ಇರುವ ಶಿಖರ್ ಧವನ್ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಧವನ್ ಮಾಹಿತಿ ಬಹಿರಂಗಪಡಿಸಿದ್ದಾರೆ. ಶಿಖರ್ ತಮ್ಮ ಖಾತೆಯಿಂದ ಬರುವ ಟ್ವೀಟ್‍ಗಳನ್ನು ಕಡೆಗಣಿಸುವಂತೆ  ಸ್ನೇಹಿತರಲ್ಲಿ ಮನವಿ ಮಾಡಿದ್ದಾರೆ.

ಶಿಖರ್ ಧವನ್ ಖಾತೆಯಿಂದ ಹ್ಯಾಕರ್ಸ್ ಅಫ್ಘಾನಿಸ್ತಾನ ತಂಡದ ರಶೀದ್ ಖಾನ್ ಗೆ ಸಂದೇಶ ಕಳುಹಿಸಿದ್ದಾರೆ. ಇದನ್ನು ನೋಡಿದ ರಶೀದ್, ಐಪಿಎಲ್ ತಂಡದ ಸಹ ಆಟಗಾರ ಶಿಖರ್ ರ ಕಾಲು ಎಳೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...