alex Certify
ಕನ್ನಡ ದುನಿಯಾ       Mobile App
       

Kannada Duniya

ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಹೊಸ ದಾಖಲೆ, ಏನದು ಗೊತ್ತಾ…?

ದಕ್ಷಿಣ ಅಫ್ರಿಕಾ ವಿರುದ್ದ ಇಂದು ನಡೆದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಆಟಗಾರ ಶಿಖರ್ ಧವನ್ ವಿಶಿಷ್ಟ ದಾಖಲೆಗೆ ಪಾತ್ರರಾಗಿದ್ದಾರೆ. 100 ನೇ ಏಕ ದಿನ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಶಿಖರ್ ಧವನ್ ಪಾತ್ರರಾಗಿದ್ದಾರೆ.

ದಕ್ಷಿಣ ಅಫ್ರಿಕಾದ ಜೋಹಾನ್ಸ್ ಬರ್ಗ್ ನ ವಾಂಡರೆರ್ಸ್ ಕ್ರೀಡಾಂಗಣದಲ್ಲಿ ಇಂದು ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ 99 ಬಾಲ್ ಗಳನ್ನು ಎದುರಿಸಿ ಶಿಖರ್ ಧವನ್ ತಮ್ಮ 13 ನೇ ಶತಕ ಗಳಿಸಿದ್ದು, 2 ಸಿಕ್ಸರ್ ಹಾಗೂ 10 ಬೌಂಡರಿ ಒಳಗೊಂಡಿದೆ. ಈ ಮೂಲಕ 100 ನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ವಿಶ್ವದ ನಾಲ್ಕನೇ ಹಾಗೂ ಭಾರತದ ಮೊದಲನೇ ಆಟಗಾರನೆಂಬ ಹೆಗ್ಗಳಿಕೆಗೆ ಧವನ್ ಪಾತ್ರರಾಗಿದ್ದಾರೆ.

1999 ರ ವಿಶ್ವ ಕಪ್ ನಲ್ಲಿ 100 ನೇ ಏಕ ದಿನ ಪಂದ್ಯವನ್ನಾಡುತ್ತಿದ್ದ ಭಾರತದ ಸೌರವ್ ಗಂಗೂಲಿ ದಾಖಲೆ ಮಾಡುವ ಹೊಸ್ತಿಲಿನಲ್ಲಿದ್ದರೂ 97 ರನ್ ಗೆ ಔಟ್ ಆಗಿದ್ದರು. ಈಗ ಶಿಖರ್ ಧವನ್ ಆ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ.

ತಮ್ಮ 100 ನೇ ಏಕ ದಿನ ಪಂದ್ಯದಲ್ಲಿ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಶಿಖರ್ ಧವನ್ ನಾಲ್ಕನೇಯವರಾಗಿದ್ದು, ಈ ಹಿಂದೆ ಗೋರ್ಡನ್ ಗ್ರೀನಿಡ್ಜ್, ಕ್ರಿಸ್ ಕ್ರೇಯ್ನ್ಸ್, ಯೂಸೂಫ್ ಯುಹಾನ ಹಾಗೂ ಕುಮಾರ ಸಂಗಕ್ಕಾರ ಈ ಸಾಧನೆ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...