alex Certify
ಕನ್ನಡ ದುನಿಯಾ       Mobile App
       

Kannada Duniya

ಜೆರ್ಸಿ ರಹಸ್ಯ ಬಿಚ್ಚಿಟ್ಟಿದ್ದಾರೆ ಶಾರ್ದೂಲ್ ಠಾಕೂರ್

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದು ನಾಲ್ಕು ವರ್ಷಗಳೇ ಕಳೆದಿವೆ. ಟೀಂ ಇಂಡಿಯಾದ ಯುವ ಆಟಗಾರ ಶಾರ್ದುಲ್ ಠಾಕೂರ್, ವಾಮನಮೂರ್ತಿಯ ನೆನಪುಗಳನ್ನು ಮತ್ತೆ ಮರುಕಳಿಸಿದ್ದಾರೆ. ಶಾರ್ದುಲ್ ಠಾಕೂರ್ ಜೆರ್ಸಿ ಮೇಲಿರೋ 10 ಅನ್ನೋ ಸಂಖ್ಯೆ ಮತ್ತೆ ಮಾಸ್ಟರ್ ಬ್ಲಾಸ್ಟರ್ ನೆನಪು ಮೂಡಿಸಿದೆ.

ಸಚಿನ್ ಕೂಡ 10 ಸಂಖ್ಯೆ ಇರೋ ಜರ್ಸಿ ಧರಿಸುತ್ತಿದ್ರು. ಆ ನಂಬರ್ ನ ಜೆರ್ಸಿ ಶಾರ್ದೂಲ್ ಗೆ ಸಿಕ್ಕಿದ್ಹೇಗೆ ಅಂತಾ ಸಾಮಾಜಿಕ ತಾಣಗಳಲ್ಲೂ ಸವಾಲುಗಳೆದ್ದಿವೆ. ಈ ಪ್ರಶ್ನೆಗಳಿಗೆ ಖುದ್ದು ಶಾರ್ದೂಲ್ ಉತ್ತರಿಸಿದ್ದಾರೆ. ಶಾರ್ದೂಲ್ ಹುಟ್ಟಿದ ದಿನಾಂಕದ ಮೊತ್ತ 10, ಹಾಗಾಗಿ ಅದೇ ನಂಬರ್ ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.

ಶಾರ್ದೂಲ್ ಕೂಡ ಮುಂಬೈನವರು. ಅವರ ಹೆಸರಿನ ಮೊದಲಕ್ಷರವೂ ‘ಎಸ್ ಟಿ’. ಲಂಕಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಆಡುವ ಮೂಲಕ ಶಾರ್ದೂಲ್, ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ. ಒಂದು ವಿಕೆಟ್ ಕೂಡ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...