alex Certify
ಕನ್ನಡ ದುನಿಯಾ       Mobile App
       

Kannada Duniya

2ನೇ ಟಿ-20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಬ್ಯಾಡ್ ನ್ಯೂಸ್

ಒಂದು ಕಡೆ ಇಂಗ್ಲೆಂಡ್ ವಿರುದ್ಧ ಟಿ-20 ಸರಣಿ ಗೆಲ್ಲಲು ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ಟೀಂ ಇಂಡಿಯಾಕ್ಕೆ ಕೆಟ್ಟ ಸುದ್ದಿಯೊಂದು ಸಿಕ್ಕಿದೆ. ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಏಕದಿನ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.

ಜುಲೈ 12 ರಿಂದ ಶುರುವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಬೂಮ್ರಾ ಮೈದಾನಕ್ಕಿಳಿಯುವುದಿಲ್ಲ. ಬೂಮ್ರಾ ಐರ್ಲೆಂಡ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ  ಚೆಂಡು ಹಿಡಿಯಲು ಹೋಗಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಟಿ-20 ಪಂದ್ಯದಿಂದ ಹೊರಗುಳಿಯಲಿರುವ ಬೂಮ್ರಾ ಏಕದಿನ ಸರಣಿಗೆ ಲಭ್ಯವಾಗಲಿದ್ದಾರೆಂದು ಮ್ಯಾನೇಜ್ಮೆಂಟ್ ನಿರೀಕ್ಷೆಯಿಟ್ಟುತ್ತು. ಆದ್ರೆ ನಿರೀಕ್ಷೆ ಸುಳ್ಳಾಗಿದೆ.

ಬುಧವಾರ ಶಸ್ತ್ರಚಿಕಿತ್ಸೆ ನಡೆಯಲಿದೆ. ನಂತ್ರ ಬೂಮ್ರಾ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಶಾರ್ದೂಲ್ ಠಾಕೂರ್ ಅವರಿಗೆ ಸ್ಥಾನ ನೀಡಲಾಗಿದೆ. ಬೂಮ್ರಾ ಬದಲು ಠಾಕೂರ್ ಮೈದಾನಕ್ಕಿಳಿಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...