alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯೋತ್ಸವಕ್ಕೆ ಹೀಗೆ ಶುಭಾಶಯ ಹೇಳಿದ್ದಾರೆ ಅಫ್ರಿದಿ

afridi

ಗಡಿಯಲ್ಲಿ ಪಾಕ್ ಪುಂಡಾಟಿಕೆ ನಿರಂತರವಾಗಿ ಮುಂದುವರೆದಿದ್ದರೂ, ಆಟಗಾರರ ನಡುವಿನ ಬಾಂಧವ್ಯ ಮಾತ್ರ ಕಡಿಮೆಯಾಗಿಲ್ಲ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಸಹಾಯಾರ್ಥ ಸಂಸ್ಥೆಗೆ ದೇಣಿಗೆ ಸಂಗ್ರಹಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟ್, ಟೀ ಶರ್ಟ್ ನೀಡಿದ್ದರು.

ನೆರೆ ಹೊರೆಯ ದೇಶಗಳಾಗಿರುವ ಪಾಕಿಸ್ತಾನ ಮತ್ತು ಭಾರತ 24 ಗಂಟೆಗಳ ಅವಧಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತವೆ.

ಬ್ರಿಟಿಷ್ ಆಡಳಿತದಿಂದ ಮುಕ್ತವಾದ ಸಂದರ್ಭದಲ್ಲಿ ಭಾರತ ಮತ್ತು ಪಾಕ್ ಇಬ್ಭಾಗವಾಗಿದ್ದು, ಎರಡೂ ದೇಶಗಳ ನಡುವೆ ಕಳೆದ 70 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಸಲ ಘರ್ಷಣೆ ನಡೆದಿದೆ.

ಇದೇ ಕಾರಣಕ್ಕೆ ಉಭಯ ದೇಶಗಳ ಸಂಬಂಧ ಹದಗೆಟ್ಟಿದ್ದು, ಕ್ರಿಕೆಟ್ ಆಡುವುದನ್ನು ನಿಲ್ಲಿಸಲಾಗಿದೆ. ಇದೇ ಸಂದರ್ಭದಲ್ಲಿ ಭಾರತದ 71 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಹಿದ್ ಅಫ್ರಿದಿ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಎರಡೂ ದೇಶಗಳ ನಡುವೆ ಶಾಂತಿ, ಸಹಿಷ್ಣುತೆ ಮತ್ತು ಪ್ರೀತಿಗಾಗಿ ಕರೆ ನೀಡಿದ್ದಾರೆ.

ಭಾರತ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಶುಭಾಶಯಗಳು. ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ಶಾಂತಿ, ಸಹಿಷ್ಣುತೆ ಹಾಗೂ ಪ್ರೀತಿಗಾಗಿ ನಾವು ಕೆಲಸ ಮಾಡೋಣ. ಮಾನವೀಯತೆಯು ಮುಂದುವರೆಯಲಿ. ನನಗೆ ಆಶಾವಾದವಿದೆ ಎಂದು ಹೇಳಿದ್ದಾರೆ.

ಅಫ್ರಿದಿ ಹೇಳಿದ್ದು ಸರಿಯಾಗಿದೆ. ಆದರೆ, ಪಾಕ್ ಕಡೆಯಿಂದ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕ ದಾಳಿಯಿಂದ ಸಂಬಂಧ ಹಾಳಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...