alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಮನ ಗೆದ್ದಿದ್ದಾರೆ ಪಾಕ್ ಕ್ರಿಕೆಟಿಗ, ಹೇಗೆ ಗೊತ್ತಾ?

ಪಾಕಿಸ್ತಾನದ ಕ್ರಿಕೆಟಿಗ ಶಾಹಿದಿ ಅಫ್ರಿದಿ ಅವರದ್ದು ನೇರ ನುಡಿ. ಹೊಗಳಿಕೆ, ಟೀಕೆ ಯಾವುದೇ ಇದ್ರೂ ಅದನ್ನು ವ್ಯಕ್ತಪಡಿಸಲು ಹಿಂಜರಿಯದ ಆಟಗಾರ. ಸ್ವಿಡ್ಜರ್ಲೆಂಡ್ ನಲ್ಲಿ ನಡೆದ ಸೇಂಟ್ ಮೊರಿಟ್ಜ್ ಐಸ್ ಕ್ರಿಕೆಟ್ ಟೂರ್ನಿಯಲ್ಲಿ ಅಫ್ರಿದಿಯ ಇನ್ನೊಂದು ಮುಖದ ಪರಿಚಯವಾಗಿದೆ.

ಭರ್ಜರಿ ಬ್ಯಾಟಿಂಗ್ ಮಾಡದೇ ಇದ್ರೂ ಭಾರತೀಯರ ಮನಗೆಲ್ಲಲು ಅವರು ಸಫಲರಾಗಿದ್ದಾರೆ. ಪಂದ್ಯದ ಬಳಿಕ ಅಭಿಮಾನಿಗಳೊಂದಿಗೆ ಅಫ್ರಿದಿ ಫೋಟೋ ಕ್ಲಿಕ್ಕಿಸಿಕೊಂಡ್ರು. ಈ ವೇಳೆ ಭಾರತೀಯ ಅಭಿಮಾನಿಗಳ ಬಳಿ ರಾಷ್ಟ್ರಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳುವಂತೆ ಅಫ್ರಿದಿ ಸೂಚಿಸಿರೋ ವಿಡಿಯೋ ವೈರಲ್ ಆಗಿದೆ.

ಉಭಯ ರಾಷ್ಟ್ರಗಳ ನಡುವಣ ವೈರತ್ವವನ್ನು ಗಮನದಲ್ಲಿಟ್ಟುಕೊಳ್ಳದೆ ಭಾರತದ ರಾಷ್ಟ್ರಧ್ವಜಕ್ಕೆ ಅಫ್ರಿದಿ ಗೌರವ ವ್ಯಕ್ತಪಡಿಸಿರುವುದಕ್ಕೆ ಟ್ವಿಟ್ಟರ್ ನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆ ಫೋಟೋಗಳನ್ನು ಅಫ್ರಿದಿ ಕೂಡ ಶೇರ್ ಮಾಡಿದ್ದಾರೆ. ಸದ್ಯ ಅಫ್ರಿದಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಮೆಂಟರ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...