alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಬಗ್ಗೆ ಪಾಕ್ ಕ್ರಿಕೆಟಿಗ ಆಫ್ರಿದಿ ಹೇಳಿದ್ದೇನು..?

Shahid-Afridi

ಕೋಲ್ಕತ್ತಾ: ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ ಇದೇ ಮಾರ್ಚ್ 19 ರಂದು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ, ಕೋಲ್ಕತ್ತಾದಲ್ಲಿ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಮೊದಲು ಧರ್ಮಶಾಲಾದಲ್ಲಿ ಪಂದ್ಯ ನಡೆಸಲು ತೀರ್ಮಾನಿಸಲಾಗಿತ್ತು.

ಆದರೆ, ಪಾಕಿಸ್ತಾನದೊಂದಿಗೆ ಪಂದ್ಯ ನಡೆದರೆ, ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಹಿಮಾಚಲ ಪ್ರದೇಶ ಸರ್ಕಾರ ಹೇಳಿದ್ದರಿಂದ, ಪಂದ್ಯವನ್ನು ಕೋಲ್ಕತ್ತಾಕ್ಕೆ ಸ್ಥಳಾಂತರಿಸಲಾಗಿದೆ. ಪಾಕಿಸ್ತಾನ ಸರ್ಕಾರದ ಅನುಮತಿಯೊಂದಿಗೆ ಪಾಕ್ ತಂಡ ಕೋಲ್ಕತ್ತಾಕ್ಕೆ ಬಂದಿಳಿದಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹೀದ್ ಆಫ್ರಿದಿ, ಭಾರತದಲ್ಲಿ ಆಟವಾಡುವಾಗ, ಎಂದಿಗೂ ನಾವು ಬೆದರಿಕೆಯನ್ನು ಎದುರಿಸಿಲ್ಲ. ಇಲ್ಲಿ ಆಟವಾಡುವಾಗೆಲ್ಲಾ ಸಂತಸದಿಂದಲೇ ಆಟವಾಡಿದ್ದೇವೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಅನ್ನು ಹೆಚ್ಚಾಗಿ ಇಷ್ಟಪಡುವ ಜನ ಭಾರತದಲ್ಲಿ ಇದ್ದಾರೆ. ಇಲ್ಲಿ ಆಟವಾಡುವಾಗ ಅವರೆಲ್ಲರ ಪ್ರೀತಿ, ಪ್ರೋತ್ಸಾಹ ಸಿಕ್ಕಿದೆ. ಭಾರತದಲ್ಲಿ ಆಟವಾಡುವುದು ಖುಷಿಯ ಕ್ಷಣ. ಪಾಕಿಸ್ತಾನಕ್ಕಿಂತ ಜಾಸ್ತಿನೇ ಪ್ರೀತಿ ಸಿಕ್ಕಿದೆ ಎಂದು ಆಫ್ರಿದಿ ಹೇಳಿದ್ದಾರೆ. ಆಫ್ರಿದಿ ಮಾತನ್ನೇ ಪುನರುಚ್ಛರಿಸಿದ ಶೋಯಬ್ ಮಲಿಕ್, ಭಾರತದಲ್ಲಿ ಆಟವಾಡುವುದು ಸಂತಸ ತರುತ್ತದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...