alex Certify
ಕನ್ನಡ ದುನಿಯಾ       Mobile App
       

Kannada Duniya

2007 ರ ಘಟನೆಯನ್ನು ಇನ್ನೂ ಮರೆತಿಲ್ಲ ಅಫ್ರಿದಿ..!

Shahid Afridi reveals name of cricketer he hates most; not many will be surprised by his pickಪಾಕಿಸ್ತಾನದ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಇಷ್ಟವಾಗದ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರೊಬ್ಬರು ಮೊದಲ ಸ್ಥಾನದಲ್ಲಿದ್ದಾರೆಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅದಕ್ಕೆ ಕಾರಣವಾಗಿದ್ದು ಮಾತ್ರ 2007 ರಲ್ಲಿ ನಡೆದ ಒಂದು ಘಟನೆ.

2007 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾನ್ಪುರದಲ್ಲಿ ಪಂದ್ಯ ನಡೆಯುತ್ತಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಗೌತಮ್ ಗಂಭೀರ್ ರನ್ ಗಾಗಿ ಓಡುತ್ತಿದ್ದರು. ಆಗ ಅವರೆದುರಿಗೆ ಶಾಹೀದ್ ಅಫ್ರಿದಿ ನಿಂತಿದ್ದು, ವೇಗವಾಗಿ ಓಡಲು ಗೌತಮ್ ಗಂಭೀರ್ ಗೆ ತೊಡಕಾಯ್ತು.

ಇದು ಇವರಿಬ್ಬರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿತ್ತಲ್ಲದೇ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದ ಸಂದರ್ಭದಲ್ಲಿ ಅಂಪೈರ್ ಮಧ್ಯ ಪ್ರವೇಶಿಸಬೇಕಾಯ್ತು. ಇದಾದ ಬಳಿಕ ಶಾಹೀದ್ ಅಫ್ರಿದಿ, ಗೌತಮ್ ಗಂಭೀರ್ ರನ್ನು ಇಷ್ಟವಾಗದ ಕ್ರಿಕೆಟಿಗರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬಾತ ಗೌತಮ್ ಗಂಭೀರ್ ಜೊತೆ ನೀವು ಈಗಲೂ ಸ್ನೇಹ ಹೊಂದಿಲ್ಲವೇ ಎಂದು ಪ್ರಶ್ನಿಸಿದಾಗ ಅದಕ್ಕುತ್ತರಿಸಿದ್ದ ಶಾಹೀದ್ ಅಫ್ರಿದಿ, ಅದು ಸಾಧ್ಯವೇ ಇಲ್ಲ ಎಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...