alex Certify
ಕನ್ನಡ ದುನಿಯಾ       Mobile App
       

Kannada Duniya

ಆಫ್ರಿದಿ ಬೇಡಿಕೆಗೆ ಸಮ್ಮತಿಸುತ್ತಾರಾ ಟೀಂ ಇಂಡಿಯಾ ಆಟಗಾರರು?

ಪಾಕಿಸ್ತಾನ ಸೂಪರ್ ಲೀಗ್ ಮೂರನೇ ಆವೃತ್ತಿ ಯಶಸ್ವಿಯಾಗಿದೆ. ಈ ಬಾರಿ ಪ್ರೇಕ್ಷಕರ ಕೊರತೆ ಇಲ್ಲದೇ ಇರೋದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೂ ಸಮಾಧಾನ ತಂದಿದೆ. ಇದನ್ನೆಲ್ಲ ನೋಡ್ತಿದ್ರೆ ವರ್ಷದಿಂದ ವರ್ಷಕ್ಕೆ ಪಾಕಿಸ್ತಾನ ಸೂಪರ್ ಲೀಗ್ ಪ್ರಸಿದ್ಧಿಗೆ ಬರುತ್ತಿರೋದಂತೂ ಸತ್ಯ.

ಹಾಗಾಗಿ ಟೀಂ ಇಂಡಿಯಾ ಆಟಗಾರರನ್ನು ಸಹ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಲು ಆಹ್ವಾನಿಸಿ ಅಂತಾ ಶಾಹಿದ್ ಅಫ್ರಿದಿ, ಪಿಸಿಬಿಗೆ ಮನವಿ ಮಾಡಿದ್ದಾರೆ. ಭಾರತದ ಆಟಗಾರರು ಐಪಿಎಲ್ ನಲ್ಲಿ ಮಾತ್ರ ಆಡುತ್ತಾರೆ. ಆದ್ರೆ ಮುಂದಿನ ಪಿಎಸ್ಎಲ್ ಆವೃತ್ತಿಯಲ್ಲಿ ಆಡುವಂತೆ ಅವರಿಗೆ ಆಹ್ವಾನ ನೀಡಬೇಕು ಎಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟಿಗರಿಗೂ ಸೇಫ್ ಅಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಾಗಿ ಕೆವಿನ್ ಪೀಟರ್ಸನ್ ಸೇರಿದಂತೆ ಹಲವು ಕ್ರಿಕೆಟಿಗರು ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಲು ಆ ದೇಶಕ್ಕೆ ಬರುಲು ನಿರಾಕರಿಸಿದ್ದರು. ಅಂಥದ್ರಲ್ಲಿ ಟೀಂ ಇಂಡಿಯಾ ಆಟಗಾರರು ಪಿಎಸ್ಎಲ್ ನಲ್ಲಿ ಆಡಲು ಸಮ್ಮತಿಸುವುದಿಲ್ಲ ಅನ್ನೋದು ಅಫ್ರಿದಿಗೂ ಗೊತ್ತಿರುವ ಸತ್ಯ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...