alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಹಿದ್ ಅಫ್ರಿದಿ ಕುಡಿ ಭಾರತೀಯ ಮಾಡೆಲ್ ಗರ್ಭದಲ್ಲಿ

arshi-khan

ಕ್ರಿಕೆಟ್ ಗೂ ಮಾಡೆಲ್ ಗಳಿಗೂ ಏನೋ ನಂಟು. ಅದ್ರಲ್ಲೂ ವಿಶ್ವಕಪ್, ಟಿ-20 ವಿಶ್ವಕಪ್ ಎಲ್ಲ ಬಂದಾಗ ಮಾಡೆಲ್ ಗಳು ಸಾಕಷ್ಟು ಸುದ್ದಿ ಮಾಡ್ತಾರೆ. ಪಾಕಿಸ್ತಾನ ಮಾಡೆಲ್ ಆಯ್ತು, ಈಗ ಭಾರತದ ಮಾಡೆಲ್ ಸರದಿ. ಪಾಕಿಸ್ತಾನದ ಟಿ-20 ತಂಡದ ನಾಯಕ ಶಾಹಿದ್ ಅಫ್ರಿದಿ ಜೊತೆ ಸಂಬಂಧವಿದೆ ಎಂದು ಈ ಹಿಂದೆ ಹೇಳಿಕೊಂಡಿದ್ದ ಮಾಡೆಲ್ ಅರ್ಶಿ ಖಾನ್ ಮತ್ತೆ ಸುದ್ದಿ ಮಾಡಿದ್ದಾಳೆ. ಆಕೆಯ ಗರ್ಭದಲ್ಲಿ ಶಾಹಿದ್ ಅಫ್ರಿದಿ ಮಗು ಬೆಳೆಯುತ್ತಿದೆಯಂತೆ.

ಮಾಧ್ಯಮಗಳ ಜೊತೆ ಮಾತನಾಡಿದ ಅರ್ಶಿ, ಶಾಹಿದ್ ಅಫ್ರಿದಿ ಮಗುವಿಗೆ ತಾಯಿಯಾಗ್ತಿದ್ದೇನೆ. ಭೋಪಾಲ್ ನಲ್ಲಿ ಮಗುವಿಗೆ ಜನ್ಮ ನೀಡುತ್ತೇನೆ ಎಂದಿದ್ದಾಳೆ. ಈ ಹಿಂದೆ ಅಫ್ರಿದಿ ಮೇಲಿದ್ದ ಪ್ರೀತಿಯನ್ನು ಅರ್ಶಿ ವ್ಯಕ್ತಪಡಿಸಿದ್ದಳು. ಸದ್ಯದಲ್ಲಿಯೇ ಪಾಕಿಸ್ತಾನಕ್ಕೆ ಬರ್ತೇನೆ ಎಂದು ಹೇಳಿದ್ದಲ್ಲದೆ, ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಳು.

ಅರ್ಶಿ ಮೂಲತಃ ಅಫ್ಘಾನಿಸ್ತಾನದವಳು. ನಾಲ್ಕು ವರ್ಷದವಳಿರುವಾಗ ಅರ್ಶಿ ತಂದೆ, ತಾಯಿ ಭೋಪಾಲ್ ಗೆ ಬಂದು ನೆಲೆಸಿದ್ರಂತೆ. ಶಾಲೆ ಹಾಗೂ ಕಾಲೇಜನ್ನು ಅರ್ಶಿ ಭೋಪಾಲ್ ನಲ್ಲಿಯೇ ಮುಗಿಸಿದ್ದಾಳೆ. ಶಾಹಿದ್ ಹಾಗೂ ಅರ್ಶಿ ನಡುವೆ ಏನೋ ನಡೀತಾ ಇದೆ ಎಂದು ಹೇಳಲಾಗಿತ್ತು. ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...