alex Certify
ಕನ್ನಡ ದುನಿಯಾ       Mobile App
       

Kannada Duniya

ವಿಕೆಟ್ ಪಡೆದರೂ ಸಂಭ್ರಮಿಸಲಿಲ್ಲ ಶಾಹಿದ್ ಅಫ್ರಿದಿ

ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಅಧ್ಬುತ ಫೀಲ್ಡಿಂಗ್ ಮೂಲಕ ಶಾಹಿದ್ ಅಫ್ರಿದಿ ಗಮನ ಸೆಳೆದಿದ್ದಾರೆ. ಕರಾಚಿ ಕಿಂಗ್ಸ್ ಪರ ಆಡ್ತಿರೋ ಆಫ್ರಿದಿ ಬೌಲಿಂಗ್ ನಲ್ಲೂ ಕಮಾಲ್ ಮಾಡಿದ್ದಾರೆ. ಪೇಶಾವರ್ ಝಾಲ್ಮಿ ವಿರುದ್ಧದ ಪಂದ್ಯದಲ್ಲಿ ಆಫ್ರಿದಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ್ರು.

ಮುಲ್ತಾನ್ ಸುಲ್ತಾನ್ ಹಾಗೂ ಲಾಹೋರ್ ಕ್ವಲಾಂಡರ್ಸ್ ವಿರುದ್ಧದ ಮ್ಯಾಚ್ ನಲ್ಲಿ ತಲಾ ಮೂರು ವಿಕೆಟ್ ಕಬಳಿಸಿದ್ರು. ಇಸ್ಲಾಮಾಬಾದ್ ಯುನೈಟೆಡ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ರಿದಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. ಮಿಸ್ಬಾ ಉಲ್ ಹಕ್ ರನ್ನು ಅಫ್ರಿದಿ ಕ್ಲೀನ್ ಬೋಲ್ಡ್ ಮಾಡಿದ್ರು.

ಆದರೆ ವಿಕೆಟ್ ಪಡೆದ ಸಂಭ್ರಮದಲ್ಲಿ ಕುಣಿದಾಡಲಿಲ್ಲ. ಆದ್ರೆ ನಂತರ ನಡೆದ ಪಂದ್ಯವೊಂದರಲ್ಲಿ ಯುವ ಆಟಗಾರನ ವಿಕೆಟ್ ಪಡೆದು, ಪೆವಿಲಿಯನ್ ನತ್ತ ಕೈತೋರಿಸಿದ್ರು. ನಂತರ ತಮ್ಮ ಅತಿರೇಕದ ವರ್ತನೆಗೆ ಟ್ವಿಟ್ಟರ್ ನಲ್ಲಿ ಕ್ಷಮೆ ಕೂಡ ಕೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...