alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳ್ತಾರಂತೆ ಅಫ್ರಿದಿ

afridi

ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಲ್ ರೌಂಡರ್ ಎನಿಸಿರುವ ಪಾಕಿಸ್ತಾನದ ಶಾಹಿದ್ ಅಫ್ರಿದಿ ಸದ್ಯದಲ್ಲಿಯೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದು, ಆ ಮೂಲಕ ಪಾಕ್ ಕ್ರಿಕೆಟ್ ತಂಡ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರನನ್ನು ಕಳೆದುಕೊಳ್ಳಲಿದೆ.

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ಸೋಲಿನ ನಂತರ ಪಾಕ್ ಟಿ-20 ಕ್ಯಾಪ್ಟನ್ ಅಫ್ರಿದಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದು, ಟಿ-20 ವಿಶ್ವಕಪ್ ನ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ತಿಳಿಸಿದ್ದಾರೆ.

ವಿಶ್ವದ ಬೆಸ್ಟ್ ಅಲ್ ರೌಂಡರ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಅಫ್ರಿದಿ 398 ಏಕದಿನ ಪಂದ್ಯದಲ್ಲಿ 8 ಸಾವಿರಕ್ಕೂ ಅಧಿಕ ರನ್ ಹಾಗೂ 395 ವಿಕೆಟ್ ಪಡೆದಿದ್ದಾರೆ. 27 ಟೆಸ್ಟ್ ಆಡಿ ಸಾವಿರದ ಏಳು ನೂರಕ್ಕೂ ಅಧಿಕ ರನ್ ಹಾಗೂ 48 ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ 6 ಹಾಗೂ ಟೆಸ್ಟ್ ನಲ್ಲಿ 5 ಸೆಂಚುರಿ ಬಾರಿಸಿದ್ದಾರೆ. ಟಿ-20 ಯಲ್ಲಿ 97 ಪಂದ್ಯಗಳನ್ನಾಡಿ ಸಾವಿರದ ಮುನ್ನೂರಕ್ಕೂ ಹೆಚ್ಚು ರನ್ ಹಾಗೂ 97 ವಿಕೆಟ್ ಪಡೆಯುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ವಿಶೇಷವೆಂದರೆ 2010 ರಲ್ಲಿ ಟೆಸ್ಟ್ ಗೆ ವಿದಾಯ ಹೇಳಿದ್ದ ಅಫ್ರಿದಿ, 2015 ರಲ್ಲಿ ಏಕದಿನ ಪಂದ್ಯದಿಂದ ನಿವೃತ್ತಿಯಾಗಿದ್ದರು. ಇದೀಗ ಟಿ-20 ವಿಶ್ವ ಕಪ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಸಂಪೂರ್ಣ ವಿದಾಯ ಹೇಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...