alex Certify
ಕನ್ನಡ ದುನಿಯಾ       Mobile App
       

Kannada Duniya

ದಕ್ಷಿಣ ಆಫ್ರಿಕಾ ಫ್ರಾಂಚೈಸಿ ಖರೀದಿ ಮಾಡಲಿದ್ದಾರೆ ಶಾರುಕ್

ct-18

ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್ ಕಣ್ಣು ಈಗ ದಕ್ಷಿಣ ಆಫ್ರಿಕಾ ಮೇಲೆ ಬಿದ್ದಿದೆ. ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕರಾಗಿರುವ ಶಾರುಕ್, ದಕ್ಷಿಣ ಆಫ್ರಿಕಾ 20-20 ಲೀಗ್ ನಲ್ಲಿ ತಮ್ಮದೊಂದು ತಂಡವನ್ನು ಮೈದಾನಕ್ಕಿಳಿಸುವ ಪ್ಲಾನ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಟ್ವಿಂಟ್ವಿ -20 ಲೀಗ್ ನ ಫ್ರಾಂಚೈಸಿಯೊಂದನ್ನು ಶಾರುಕ್ ಖರೀದಿ ಮಾಡಲಿದ್ದಾರೆ ಎನ್ನಲಾಗ್ತಾ ಇದೆ.

ದಕ್ಷಿಣ ಆಫ್ರಿಕಾ ಟಿ-20 ಗ್ಲೋಬಲ್ ಲೀಗ್ ನಲ್ಲಿ 9 ತಂಡಗಳಿರಲಿವೆ. ಈ ತಂಡಗಳ ಫ್ರಾಂಚೈಸಿ ಘೋಷಣೆ ಜೂನ್ 19ರಂದು ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿದೆ. ಮಾಹಿತಿಗಳ ಪ್ರಕಾರ ಶಾರುಕ್ ಖಾನ್ ಸ್ಫೋರ್ಟ್ಸ್ ಟೀಂ ಸಿ ಎಸ್ ಎ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ. ಕೇಪ್ ಟೌನ್ ಅಥವಾ ಜೊಹಾನ್ಸ್ ಬರ್ಗ್ ತಂಡವನ್ನು ಶಾರುಕ್ ಖರೀದಿ ಮಾಡುವ ಸಾಧ್ಯತೆ ಇದೆ.

ಬಾಲಿವುಡ್ ಸೆಲೆಬ್ರಿಟಿಗಳು, ಭಾರತದ ಉದ್ಯಮಿಗಳು ಹಾಗೂ ದಕ್ಷಿಣ ಆಫ್ರಿಕಾದಲ್ಲಿ ವಾಸವಾಗಿರುವ ಭಾರತೀಯ ಮೂಲದವರು ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ. ಕೆಲ ಐಪಿಎಲ್ ಮಾಲೀಕರು ಕೂಡ ಬಿಡ್ ಮಾಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...