alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಟ್ ಸೂಟ್ ಗೆ ಬೈ, ಟುಟು ಸ್ಕರ್ಟ್ ಗೆ ಸೆರೆನಾ ಜೈ…!

ಅಮೆರಿಕದ ಸ್ಟಾರ್ ಟೆನಿಸ್ ಪ್ಲೇಯರ್ ಸೆರೆನಾ ವಿಲಿಯಮ್ಸ್, ಉಡುಪಿನಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಯು.ಎಸ್. ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯ ಸಾಧಿಸಿರುವ ಸೆರೆನಾ, 24ನೇ ಗ್ರ್ಯಾಂಡ್ ಸ್ಲ್ಯಾಮ್ ಕನಸಿನಲ್ಲಿದ್ದಾರೆ. ಪಂದ್ಯದ ವೇಳೆ ಸೆರೆನಾ ತೊಟ್ಟಿದ್ದ ಡ್ರೆಸ್ ಮತ್ತೊಮ್ಮೆ ಎಲ್ಲರನ್ನು ಆಕರ್ಷಿಸಿದ್ದಂತೂ ಸುಳ್ಳಲ್ಲ.

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ವೇಳೆ ಸೆರೆನಾ ಕಪ್ಪು ಬಣ್ಣದ ಕ್ಯಾಟ್ ಸೂಟ್ ಧರಿಸಿದ್ದರು. ಈ ಸೂಟ್ ನಿಂದಲೇ ಸೆರೆನಾ ಫ್ರೆಂಚ್ ಓಪನ್ ವೇಳೆ ಸುದ್ದಿಯಲ್ಲಿದ್ದರು. ಕ್ಯಾಟ್ ಸೂಟ್ ಉಡುಗೆಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಸೆರೆನಾ ಹೊಸ ಉಡುಗೆ ಎಲ್ಲರನ್ನು ಆಕರ್ಷಿಸಿದೆ. ತವರಿನಲ್ಲಿ ನಡೆಯುತ್ತಿರುವ ಅಮೆರಿಕ ಟೆನಿಸ್ ಟೂರ್ನಿಯಲ್ಲಿ ಸೆರೆನಾ ಕಪ್ಪು ಬಣ್ಣದ ಟುಟು ಸ್ಕರ್ಟ್ ತೊಟ್ಟು ಅಂಗಳಕ್ಕೆ ಇಳಿದಿದ್ರು.

ಸೆರೆನಾ ಅಂಗಳಕ್ಕೆ ಎಂಟ್ರಿ ನೀಡಿದಾಗ ಇವರು ತೊಟ್ಟ ಡ್ರೆಸ್ ಎಲ್ಲರ ಗಮನ ಸೆಳೆದಿತ್ತು. ಎಡಗೈಯನ್ನು ಫುಲ್ ಕವರ್ ಮಾಡಿ, ಬಲಗೈ ಕವರ್ ಮಾಡದೆ ಇರೋ ಉಡುಗೆ ತೊಟ್ಟು ಸೆರೆನಾ ಅಂಗಳಕ್ಕೆ ಇಳಿದ್ರು. ಈ ಉಡುಗೆಯನ್ನು ಖ್ಯಾತ ವಸ್ತ್ರ ವಿನ್ಯಾಸಕರಾದ ಲೂಯಿಸ್ ವಿಟಾನ್ ಮತ್ತು ವಿರ್ಜಿಲ್ ತಯಾರಿಸಿದ್ದಾಗಿದೆ. ಸದ್ಯ ಸೆರೆನಾ ತೊಟ್ಟ ಟುಟು ಸ್ಕರ್ಟ್ ಎಲ್ಲರ ಗಮನ ಸೆಳೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...