alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಮಗುವಾದ್ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಟಗಾರ್ತಿ

ಅಮೆರಿಕಾದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಗೆಳೆಯ ಅಲೆಕ್ಸಿಸ್ ಓನಿಯಾನ್  ಜೊತೆ ಸೆರೆನಾ ಕೊನೆಗೂ ವಿವಾಹವಾಗಿದ್ದಾರೆ.

ಸೆರೆನಾ ಹಾಗೂ ಅಲೆಕ್ಸಿಸ್ ಓನಿಯಾನ್ ಸುಮಾರು ಎರಡು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಪ್ರೀತಿಸುತ್ತಿದ್ದರು. 2016ರಲ್ಲಿಯೇ ಸೆರೆನಾ ಮದುವೆಗೆ ಒಪ್ಪಿದ್ದಾರೆ ಎನ್ನಲಾಗ್ತಾಯಿತ್ತು. ಆದ್ರೆ ಸೆರೆನಾ ಗರ್ಭಿಣಿ ಎಂಬ ಸುದ್ದಿ ಬಂತು. ಎರಡು ತಿಂಗಳ ಹಿಂದಷ್ಟೇ ಸೆರೆನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಲೆಕ್ಸಿಸ್ ಒಲಂಪಿಯಾ ಓಹಿಯನ್ ಜೂನಿಯರ್ ಎಂದು ಹೆಸರಿಡಲಾಗಿದೆ.

ಈಗ ಸೆರೆನಾ ಹಾಗೂ ಅಲೆಕ್ಸಿಸ್ ಓನಿಯಾನ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಕಿಮ್ ಕರ್ದಾಷಿಯನ್, ವೀನಸ್ ವಿಲಿಯಮ್ಸ್, ಬೆಯಾನ್ಸ್ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಪಾಲ್ಗೊಂಡಿದ್ದರು. ಕೋಟಿಗಟ್ಟಲೆ ಹಣವನ್ನು ಮದುವೆಗಾಗಿ ಖರ್ಚು ಮಾಡಲಾಗಿದೆ.

ಬ್ಯೂಟಿ ಮತ್ತು ಬೀಸ್ಟ್ ಥೀಮನ್ನು ಮದುವೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸೆರೆನಾಗಿಂತ ಓನಿಯಾನ್ ಎರಡು ವರ್ಷ ಚಿಕ್ಕವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...