alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಯ ಊಟ ತಿಂದ ಟೆನಿಸ್ ತಾರೆಗೆ ಆಗಿದ್ದೇನು..?

serena willams m

ರೋಮ್: ಏನೋ ಮಾಡಲು ಹೋಗಿ ಮತ್ತೇನೋ ಮಾಡಿದರು ಎಂಬಂತೆ ಕೆಲವೊಮ್ಮೆ ಯಡವಟ್ಟಿನಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಖ್ಯಾತ ಟೆನಿಸ್ ತಾರೆ ಏನು ಮಾಡಿಕೊಂಡಿದ್ದಾರೆ ನೋಡಿ.

ಟೇಸ್ಟ್ ನೋಡುವ ಉದ್ದೇಶದಿಂದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ತನ್ನ ಸಾಕು ನಾಯಿಗೆ ತಿನ್ನಲು ತಂದಿದ್ದ ಊಟವನ್ನು ತಿಂದಿದ್ದಾರೆ. ಮಾತ್ರವಲ್ಲ, ತಾವು ನಾಯಿಯ ಊಟದ ರುಚಿ ನೋಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ. ಯಾರ್ಕ್ ಶೈರ್ ಟೆರಿರ್ ಜಾತಿಗೆ ಸೇರಿದ ಚಿಪ್ ನಾಯಿಯೊಂದಿಗೆ ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹೋಟೆಲ್ ಒಂದರಲ್ಲಿ ತಂಗಿದ್ದರು.

ಹೋಟೆಲ್ ಗಳಲ್ಲಿ ಸಾಮಾನ್ಯವಾಗಿ ನಾಯಿಗಳ ಫುಡ್ ಮೆನುವಿನಲ್ಲಿ ಸೂಪ್ ಹೊರತಾಗಿ ವಿಶೇಷ ಪದಾರ್ಥಗಳಿರಲಿಲ್ಲ. ಈ ಹೋಟೆಲ್ ನಲ್ಲಿ ಸಾಲ್ಮನ್ ಊಟವಿತ್ತು. ನಾನು ಸಾಲ್ಮನ್ ಊಟವನ್ನು ತಿನ್ನುವುದರಿಂದ ರುಚಿ ನೋಡಲು ಒಂದು ಚಮಚ ತಿಂದೆ ಎಂದು ಹೇಳಿಕೊಂಡಿದ್ದಾರೆ. ಇದಾದ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಟಾಯ್ಲೆಟ್ ಗೆ ಹೋಗುವಂತಾಗಿತ್ತು. ನಾಯಿಯ ಸಾಲ್ಮನ್ ತಿಂದರೆ ಹೀಗೆ ಆಗುತ್ತೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...