alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಿ ವಿಶ್ವ ದಾಖಲೆಗೀಗ 11 ವರ್ಷ….

ಭಾರತದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಆರು ಬಾಲ್‌ಗೆ ಆರು ಸಿಕ್ಸ್‌ ಹೊಡೆಯುವ ಮೂಲಕ ಇತಿಹಾಸ ಸೃಷ್ಟಿಸಿ ಬುಧವಾರಕ್ಕೆ 11 ವಸಂತಗಳು ಪೂರ್ಣಗೊಳಿಸಿದ್ದು, ಇದನ್ನು ಬಿಸಿಸಿಐ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ.

2007ರ ದಕ್ಷಿಣ ಆಫ್ರಿಕಾದಲ್ಲಿ ಟಿ-ಟ್ವೆಂಟಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ 19ನೇ ಓವರ್‌ನಲ್ಲಿ ಸ್ಪುವರ್ಟ್ ಬ್ರಾಡ್ ರ ಆರು ಬಾಲ್‌ಗೆ ಆರು ಸಿಕ್ಸರ್ ಹೊಡೆಯುವ ಮೂಲಕ ಕೇವಲ 12 ಬಾಲ್‌ನಲ್ಲಿ ಆರ್ಧ ಶತಕ ಪೂರೈಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದರು.

ಸೆಮಿ ಫೈನಲ್ ಪ್ರವೇಶಿಸಲು ಇಂಗ್ಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯಿತ್ತು. 18ನೇ ಓವರ್ ಅಂತ್ಯದಲ್ಲಿ ಫ್ಲಿಂಟಾಫ್‌ನೊಂದಿಗೆ ಜಗಳವಾಡಿಕೊಂಡಿದ್ದ ಯುವಿ, ಆ ಸಿಟ್ಟನ್ನು ಬ್ಯಾಟ್ ಮೂಲಕ ಬ್ರಾಡ್ ಎಸೆದ ಆರು ಚೆಂಡನ್ನು ಗಡಿ ದಾಟಿಸಿದರು. ಇದಕ್ಕೂ ಮೊದಲು ಹರ್ಷಲ್ ಗಿಬ್ಸ್ ಅವರು ಏಕದಿನ ವಿಶ್ವಕಪ್ ಈ ದಾಖಲೆ ಬರೆದಿದ್ದರು. ಯುವಿಯ ಈ ಸಾಧನೆಯ ಫೋಟೊಗಳನ್ನು ಬಿಸಿಸಿಐ ತನ್ನ ಖಾತೆಯಲ್ಲಿ ದಿನ ವಿಶೇಷವೆಂದು ಹಾಕಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...