alex Certify
ಕನ್ನಡ ದುನಿಯಾ       Mobile App
       

Kannada Duniya

ನೆಚ್ಚಿನ ತಂಡ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಮಾಡಿದ್ದೇನು ಗೊತ್ತಾ…?

ರಷ್ಯಾದಲ್ಲಿ ಫಿಫಾ ವಿಶ್ವಕಪ್ ಆರಂಭವಾಗಿದೆ. ಮೂವತ್ತು ದಿನಗಳ ಕಾಲದ ಈ ಫುಟ್ಬಾಲ್ ಹಬ್ಬದಲ್ಲಿ ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ವಿಶ್ವದೆಲ್ಲೆಡೆಯಿಂದ ರಷ್ಯಾಗೆ ತೆರಳುತ್ತಿದ್ದಾರೆ.

ಇದರ ಮಧ್ಯೆ ಸೆನೆಗಲ್ ತಂಡದ ಅಭಿಮಾನಿಗಳು ಪೋಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಗೆಲ್ಲುತ್ತಿದ್ದಂತೆ ಮಾಡಿರುವ ಕಾರ್ಯವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಪೋಲೆಂಡ್ ವಿರುದ್ಧ 2-1 ಅಂತರದಲ್ಲಿ ಸೆನೆಗಲ್ ಜಯ ಸಾಧಿಸಿದ್ದು, ತಮ್ಮ ತಂಡ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಸೆನೆಗಲ್ ಅಭಿಮಾನಿಗಳು, ಬಳಿಕ ಕ್ರೀಡಾಂಗಣದಲ್ಲಿ ತಾವೂ ಸೇರಿದಂತೆ ಇತರೆ ಪ್ರೇಕ್ಷಕರು ಎಲ್ಲೆಂದರಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಬಾಟಲಿ ಹಾಗೂ ಕಸಕಡ್ಡಿಗಳನ್ನು ಸಂಗ್ರಹಿಸಿ ಡಸ್ಟ್ ಬಿನ್ ಗೆ ಹಾಕುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ಸೆನೆಗಲ್ ಫುಟ್ಬಾಲ್ ತಂಡದ ಅಭಿಮಾನಿಗಳ ಈ ಕಾರ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಹಿಂದೆ ಜಪಾನ್ ತಂಡದ ಅಭಿಮಾನಿಗಳು ಇಂಥದ್ದೇ ಕಾರ್ಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...