alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ನಂತರ ಯಾರಾಗ್ತಾರೆ ಟೀಂ ಇಂಡಿಯಾ ವಿಕೆಟ್ ಕೀಪರ್…?

ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಟೀಂ ಇಂಡಿಯಾಕ್ಕೆ ಇಷ್ಟು ದಿನ ವಿಕೆಟ್ ಕೀಪಿಂಗ್ ತಲೆಬಿಸಿ ಇರಲಿಲ್ಲ. ಮಹೇಂದ್ರ ಸಿಂಗ್ ಧೋನಿ ಕಳೆದ ಹಲವು ವರ್ಷಗಳಿಂದ ಆ ಜವಾಬ್ಧಾರಿಯನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಆದ್ರೀಗ ಮಾಹಿಗೂ ವಯಸ್ಸಾಗಿದೆ, ಕ್ರಿಕೆಟ್ ನಿಂದ ನಿವೃತ್ತಿ ಪಡೆಯೋ ಸಮಯ ಹತ್ತಿರವಾಗ್ತಾ ಇದೆ.

ಅಕಸ್ಮಾತ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ರೆ? ಅಥವಾ ಬಿಸಿಸಿಐ ಅವರನ್ನು ತಂಡದಿಂದ ಕೈಬಿಟ್ರೆ ಆಯ್ಕೆ ಸಮಿತಿಗೆ ಹೊಸ ತಲೆನೋವು ಶುರುವಾಗುತ್ತದೆ. ಟೀಂ ಇಂಡಿಯಾಕ್ಕೆ ವಿಕೆಟ್ ಕೀಪರ್ ಆಗಿ ಯಾರನ್ನು ಆಯ್ಕೆ ಮಾಡೋದು ಅನ್ನೋ ಸಮಸ್ಯೆ ಕಾಡುತ್ತದೆ.

ಸದ್ಯ ಧೋನಿಯನ್ನು ಬಿಟ್ರೆ ಭಾರತದಲ್ಲಿರೋ ಕೀಪರ್ ಗಳೆಂದ್ರೆ ಪಾರ್ಥಿವ್ ಪಟೇಲ್ ಹಾಗೂ ದಿನೇಶ್ ಕಾರ್ತಿಕ್. ಬ್ಯಾಟಿಂಗ್ ನಲ್ಲಿ ಇಬ್ಬರೂ ಹೇಳಿಕೊಳ್ಳುವಂಥ ಪ್ರದರ್ಶನ ನೀಡುತ್ತಿಲ್ಲ. ಕಾರ್ತಿಕ್ ಹಾಗೂ ಪಾರ್ಥಿವ್ ಪಟೇಲ್ ನಂತರ ಕೀಪಿಂಗ್ ಮಾಡುವವರು ಯಾರು ಅನ್ನೋದು ಆಯ್ಕೆ ಸಮಿತಿಗೆ ಇರುವ ಗೊಂದಲ.

ಹಾಗಾಗಿ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಚೆನ್ನಾಗಿ ಕೀಪಿಂಗ್ ಹಾಗೂ ಬ್ಯಾಟಿಂಗ್ ಮಾಡ್ತಿರೋ ಆಟಗಾರರ ಶೋಧಕ್ಕೆ ಆಯ್ಕೆ ಸಮಿತಿ ಮುಂದಾಗಿದೆ. ರಿಶಬ್ ಪಂಥ್, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಮೇಲೆ ಒಂದು ಕಣ್ಣಿಟ್ಟಿದೆ. ಡೊಮೆಸ್ಟಿಕ್ ಆಟಗಾರರಿಗೆ ಚೆನ್ನಾಗಿ ತರಬೇತಿ ಕೊಟ್ರೆ ಅವರನ್ನು ಉತ್ತಮ ಕೀಪರ್ ಆಗಿ ರೂಪಿಸಬಹುದು ಅನ್ನೋದು ಆಯ್ಕೆ ಸಮಿತಿಯ ಮುಖ್ಯಸ್ಥ ಕಿರಣ್ ಮೋರೆ ಅವರ ಅಭಿಪ್ರಾಯ.

ಧೋನಿ ನಂತರ ವಿಕೆಟ್ ಹಿಂದೆ ಗ್ಲೌಸ್ ತೊಡುವವರು ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆಯ್ಕೆ ಸಮಿತಿ ಕೆ.ಎಲ್. ರಾಹುಲ್ ಗೆ ಒಂದು ಚಾನ್ಸ್ ಕೊಟ್ಟರೂ ಅಚ್ಚರಿಯಿಲ್ಲ. ಏಕದಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿರೋ ರಾಹುಲ್, ಕೀಪಿಂಗ್ ಕೂಡ ಚೆನ್ನಾಗಿ ಮಾಡುತ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...