alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಹ್ವಾಗ್ ಹಂಚಿಕೊಂಡ್ರು ಕಣ್ಣೀರು ತರಿಸುವ ವಿಡಿಯೋ

ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಮನಕಲಕುವ ವಿಡಿಯೋ ಒಂದನ್ನು ಹಾಕಿದ್ದಾರೆ. ಸೆಹ್ವಾಗ್ ಈ ವಿಡಿಯೋ ಮೂಲಕ ಹಸಿವಿನ ಬಗ್ಗೆ ಹಾಗೂ ಆಹಾರ ಹಾಳು ಮಾಡಬೇಡಿ ಎಂಬ ಸಂದೇಶ ಸಾರಿದ್ದಾರೆ.

ಸೆಹ್ವಾಗ್ ಹಾಕಿರುವ ವಿಡಿಯೋದಲ್ಲಿ ಮಣ್ಣಿಗೆ ನೀರು ಹಾಕಿ ಅದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿ ಅದನ್ನು ರೊಟ್ಟಿಯಂತೆ ಮಾಡಲಾಗ್ತಿದೆ. ನಂತ್ರ ಅದನ್ನು ಬಿಸಿಲಿನಲ್ಲಿ ಒಣಗಿಸಿ ಜನ ತಿನ್ನುತ್ತಿದ್ದಾರೆ. ಹಸಿವಿನಲ್ಲಿರುವ ಜನರು ಆಹಾರ ಸಿಗದೆ ಮಣ್ಣಿಗೆ ಉಪ್ಪು ಬೆರೆಸಿ ತಿನ್ನುತ್ತಿರುವ ಈ ವಿಡಿಯೋ ಮೂಲಕ ಸೆಹ್ವಾಗ್ ಹಸಿವಿನ ಮಹತ್ವ ಹೇಳಿದ್ದಾರೆ.

ಬಡ ಜನರು ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ. ಪ್ಲೀಸ್ ಆಹಾರವನ್ನು ಹಾಳು ಮಾಡಬೇಡಿ. ಮಿಕ್ಕ ಆಹಾರವನ್ನು ಅವಶ್ಯಕತೆಯಿರುವವರಿಗೆ ನೀಡಿ. ಇಲ್ಲವೆ ಫುಡ್ ಬ್ಯಾಂಕ್ ಗೆ ನೀಡಿ ಎಂದು ಸೆಹ್ವಾಗ್ ಹೇಳಿದ್ದಾರೆ. ಸೆಹ್ವಾಗ್ ಈ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ಸೇವಾ ಸಂಸ್ಥೆಗಳ ನಂಬರ್ ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...