alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಹ್ವಾಗ್ ಮೂರ್ಖತನದ ಮಾತನಾಡಿದ್ದಾರೆ: ಗಂಗೂಲಿ

ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೆಹ್ವಾಗ್ ಮೂರ್ಖತನದ ಮಾತುಗಳನ್ನಾಡಿದ್ದಾರೆಂದು ಸೌರವ್ ಗಂಗೂಲಿ ಹೇಳಿದ್ದಾರೆ. ಈ ಬಗ್ಗೆ ನಾನೇನು ಹೇಳುವುದಿಲ್ಲ. ಇದೊಂದು ಮೂರ್ಖತನದ ಮಾತು ಎಂದಿದ್ದಾರೆ ಗಂಗೂಲಿ.

ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವೀರೇಂದ್ರ ಸೆಹ್ವಾಗ್ ತಾವು ಕೋಚ್ ಆಗದಿರಲು ಕಾರಣವೇನು ಎಂಬುದನ್ನು ಹೇಳಿದ್ದರು. ಬಿಸಿಸಿಐ ಜೊತೆ ನನ್ನ ಸೆಟ್ಟಿಂಗ್ ಇರಲಿಲ್ಲ. ಹಾಗಾಗಿ ನಾನು ಕೋಚ್ ಆಗಿ ಆಯ್ಕೆಯಾಗಿರಲಿಲ್ಲ ಎಂದಿದ್ದರು.

ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿರುವ ಸೌರವ್ ಗಂಗೂಲಿ ಈ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸೆಪ್ಟೆಂಬರ್ 21ರಂದು ನಡೆಯುವ ಭಾರತ-ಆಸ್ಟ್ರೇಲಿಯಾ ನಡುವಿನ ನಡೆಯುವ ಎರಡನೇ ಏಕದಿನ ಪಂದ್ಯದ ಬಗ್ಗೆ ಮಾತನಾಡಿದ ಗಂಗೂಲಿ ಪಂದ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಈಗಾಗಲೇ ಬಹುತೇಕ ಟಿಕೆಟ್ ಮಾರಾಟವಾಗಿದ್ದು ಈಡನ್ ಗಾರ್ಡನ್ ತುಂಬುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...