alex Certify
ಕನ್ನಡ ದುನಿಯಾ       Mobile App
       

Kannada Duniya

ಬುಡಕಟ್ಟು ಮಹಿಳೆಯರ ನೆರವಿಗೆ ಧಾವಿಸಿದ ಸೆಹ್ವಾಗ್

ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಕೇರಳದ ಬುಡಕಟ್ಟು ಮಹಿಳೆಯರ ನೆರವಿಗೆ ಬಂದಿದ್ದಾರೆ. ಸೆಹ್ವಾಗ್ ಸಾಮಾಜಿಕ ಕಾರ್ಯಕರ್ತರಿಗೆ 1.5 ಲಕ್ಷ ರೂಪಾಯಿ ಚೆಕ್ ಕಳುಹಿಸಿದ್ದಾರೆ. ಶೀಘ್ರದಲ್ಲಿಯೇ ಈ ಹಣ ಅವಶ್ಯಕತೆಯಿರುವ ಮಹಿಳೆಯರನ್ನು ತಲುಪಲಿದೆ.

ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಹ್ವಾಗ್ ಬುಡಕಟ್ಟು ಕುಟುಂಬದ ನೆರವಿಗಾಗಿ 1.5 ಲಕ್ಷ ರೂಪಾಯಿ ಚೆಕ್ ಕಳುಹಿಸಿದ್ದಾರೆ. ಏಪ್ರಿಲ್ 11ರಂದು ಬಡ ಕುಟುಂಬಕ್ಕೆ ಇದು ತಲುಪಲಿದೆ ಎಂದಿದ್ದಾರೆ.

ವೃದ್ಧ ಮಹಿಳೆ ಮಗ ಮಧು ಎಂಬಾತನನ್ನು ಎರಡು ತಿಂಗಳ ಹಿಂದೆ ಹೊಡೆದು ಕೊಲೆ ಮಾಡಲಾಗಿತ್ತು. ಅಂಗಡಿಯಲ್ಲಿ ಅಕ್ಕಿ ಹಾಗೂ ಕೆಲ ಸಾಮಾನುಗಳನ್ನು ಕಳ್ಳತನ ಮಾಡಿದ್ದಾನೆಂದು ಮಧುವನ್ನು ಹೊಡೆದು ಕೊಲೆ ಮಾಡಿದ್ದರು. ಮಧು ಸಾವಿನ ನಂತ್ರ ಬುಡಕಟ್ಟು ಕುಟುಂಬದ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಈ ಪ್ರಕರಣದ ಬಗ್ಗೆ ಸಿಎಂ ಕೂಡ ದುಃಖ ವ್ಯಕ್ತಪಡಿಸಿದ್ದರು. ನಾಗರಿಕ ಸಮಾಜದಲ್ಲಿ ಇಂಥ ಘಟನೆಗಳಿಗೆ ಅವಕಾಶವಿಲ್ಲ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದರು. ಫೆಬ್ರವರಿ 22ರಂದು ಘಟನೆ ನಡೆದಿತ್ತು. ಮಧುಗೆ ಹೊಡೆದ ವಿಡಿಯೋ ವೈರಲ್ ಕೂಡ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...