alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಸಿ.ಸಿ.ಐ.ಗೆ ಸುಪ್ರೀಂ ಕೋರ್ಟ್ ಕಡಿವಾಣ

sc-sc-s

ನವದೆಹಲಿ: ಲೋಧಾ ಸಮಿತಿ ಶಿಫಾರಸು ಜಾರಿ ಮಾಡಲು ಹಿಂದೇಟು ಹಾಕುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿ.ಸಿ.ಸಿ.ಐ.) ಸುಪ್ರೀಂ ಕೋರ್ಟ್  ಚಾಟಿ ಬೀಸಿದೆ.

ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡದ ಹೊರತು, ಬಿ.ಸಿ.ಸಿ.ಐ.ನಿಂದ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಬಾರದೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಲೋಧಾ ಸಮಿತಿಯ ಶಿಫಾರಸು ಜಾರಿಗೊಳಿಸುವ ಕುರಿತಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯೊಂದಿಗೆ ಯಾವ ಚರ್ಚೆ ನಡೆದಿದೆ ಎಂಬುದರ ಮಾಹಿತಿ ನೀಡಲು ಬಿ.ಸಿ.ಸಿ.ಐ. ಅಧ್ಯಕ್ಷರಿಗೆ ಸೂಚಿಸಲಾಗಿದೆ.

ಲೋಧಾ ಸಮಿತಿ ಶಿಫಾರಸು ಜಾರಿಯಾಗುವವರೆಗೆ ಅಂಗ ಸಂಸ್ಥೆಗಳಿಗೆ ಹಣ ನೀಡಬಾರದೆಂದು ತಿಳಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 9 ಕ್ಕೆ ಮುಂದೂಡಲಾಗಿದೆ. ಸುಪ್ರೀಂ ಕೋರ್ಟ್ ಖಡಕ್ ಸೂಚನೆ ಹಿನ್ನಲೆಯಲ್ಲಿ ಲೋಧಾ ಸಮಿತಿಯ ಶಿಫಾರಸು ಜಾರಿಗೆ ಒಪ್ಪಿಕೊಳ್ಳುವುದಾಗಿ ಬಿಸಿಸಿಐ ಅಫಿಡವಿಟ್  ಸಲ್ಲಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...