alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಡೋನೇಷ್ಯಾದಲ್ಲಿ ರಜೆ ಎಂಜಾಯ್ ಮಾಡ್ತಿದ್ದಾಳೆ ಸಚಿನ್ ಪುತ್ರಿ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಇಂಡೋನೇಷ್ಯಾ ಪ್ರವಾಸದಲ್ಲಿದ್ದಾರೆ. ಸ್ನೇಹಿತರ ಜೊತೆ ಬಾಲಿಯಲ್ಲಿ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಸಾರಾ ಇನ್ಸ್ಟ್ರಾಗ್ರಾಮ್ ನಲ್ಲಿ ಸ್ನೇಹಿತರ ಜೊತೆಗಿರುವ ಫೋಟೋ ಹಾಕಿಕೊಂಡಿದ್ದಾರೆ.

ಸಾರಾ ಕೆಲ ದಿನಗಳ ಹಿಂದಷ್ಟೇ ದುಬೈ ಸುತ್ತಿ ಬಂದಿದ್ದಾರೆ. ದುಬೈನ ಪ್ರಸಿದ್ಧ Madinat Jumeirah Resort ಮುಂದೆ ಫೋಟೋ ತೆಗೆದು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದರು. ಸಾರಾ ಈ ಫೋಟೋಕ್ಕೆ ಬಳಕೆದಾರರು ಕ್ಯೂಟ್ ಕಮೆಂಟ್ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಾರಾ, ಆಗಾಗ ಇನ್ಸ್ಟ್ರಾಗ್ರಾಮ್ ನಲ್ಲಿ ತಮ್ಮ ಫೋಟೋ ಹಾಕ್ತಿರುತ್ತಾರೆ. ಸಾರಾ ಪ್ರಚಾರ ಜಗತ್ತಿನಿಂದ ದೂರವಿದ್ದಾರೆ. ಸ್ನೇಹಿತರು ಹಾಗೂ ತಂದೆ-ತಾಯಿ ಜೊತೆ ಮಾತ್ರ ಪಾರ್ಟಿಯಲ್ಲಿ ಕಾಣಿಸಿಕೊಳ್ತಾರೆ ಸಾರಾ. ಪ್ರೀತಿಯ ಮಗಳ ಮೇಲೆ ಸಚಿನ್ ಗೆ ಪ್ರೀತಿ ಹೆಚ್ಚು. ಮಗಳ ಸುರಕ್ಷತೆ ಬಗ್ಗೆ ಹೆಚ್ಚು ಗಮನ ನೀಡುವ ಸಚಿನ್, ನಕಲಿ ಟ್ವೀಟರ್ ಅಕೌಂಟ್ ಬಗ್ಗೆ ತಮ್ಮ ಕೋಪ ವ್ಯಕ್ತಪಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...