alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಚ್ ಫಿಕ್ಸಿಂಗ್ ಕಿಂಗ್ ಪಿನ್ ಚಾವ್ಲಾ ಅರೆಸ್ಟ್

hansei-cronje2000 ನೇ ಇಸ್ವಿಯಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಆರೋಪಿ ಸಂಜೀವ್ ಕುಮಾರ್ ಚಾವ್ಲಾ ಕೊನೆಗೂ ಲಂಡನ್ ನಲ್ಲಿ ಸೆರೆಸಿಕ್ಕಿದ್ದಾನೆ. ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ, ದಿವಂಗತ ಹ್ಯಾನ್ಸಿ ಕ್ರೋನಿಯೆ ವಿರುದ್ಧ ಕೂಡ 2013ರಲ್ಲಿ ದೆಹಲಿ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದರು.

ತನಿಖಾಧಿಕಾರಿಗಳ ಮನವಿ ಮೇರೆಗೆ ಕೋರ್ಟ್, ಆರೋಪಿ ಸಂಜೀವ್ ಕುಮಾರ್ ಚಾವ್ಲಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ದೆಹಲಿ ಪೊಲೀಸರ ಮನವಿ ಮೇರೆಗೆ ಲಂಡನ್ ನ ಮೊಂಕ್ ವಿಲ್ಲಾ ಅವೆನ್ಯೂನಲ್ಲಿ ನೆಲೆಸಿದ್ದ ಸಂಜೀವ್ ಕುಮಾರ್ ರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಭಾರತಕ್ಕೆ ಕರೆತಂದು ವಿಚಾರಣೆ ನಡೆಸಲು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.

ಫಿಕ್ಸಿಂಗ್ ಕೇಸ್ ನ ಇನ್ನೊಬ್ಬ ಆರೋಪಿ ಮನಮೋಹನ್ ಕುಮಾರ್ ಖಟ್ಟರ್ ಗೆ ಸಿಬಿಐ ಮೂಲಕ ರೆಡ್ ನೋಟಿಸ್ ನೀಡಲಾಗಿದೆ. 2000ನೇ ಇಸ್ವಿಯ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದ್ದು, ಹ್ಯಾನ್ಸಿ ಕ್ರೋನಿಯೆ ಜೊತೆ ಸಂಜೀವ್ ಕುಮಾರ್ ಚಾವ್ಲಾ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಕ್ರೋನಿಯೆ ಹಾಗೂ ಚಾವ್ಲಾ ನಡುವೆ ನಡೆದ ಫೋನ್ ಸಂಭಾಷಣೆ ಕೂಡ ಲಭ್ಯವಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...