alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯ್ತನದ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದೇನು..?

sania-mirza

ಭಾರತದ ಭರವಸೆಯ ಟೆನಿಸ್ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ಅವರ ಆತ್ಮಕಥನ ‘ಏಸ್ ಎಗೆನೆಸ್ಟ್ ಓಡ್ಸ್’  ಇತ್ತೀಚೆಗೆ ಖ್ಯಾತನಟ ಶಾರುಖ್ ಖಾನ್ ಅವರಿಂದ ಬಿಡುಗಡೆಯಾಗಿದ್ದು, ಓದುಗರಲ್ಲಿ ಕುತೂಹಲ ಮೂಡಿಸಿದೆ.

ಸಾನಿಯಾ ತಮ್ಮ ಆತ್ಮಕಥನದ ಕುರಿತಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು, ಈ ಸಂದರ್ಭದಲ್ಲಿ ಅವರಿಗೆ ಹಲವಾರು ಪ್ರಶ್ನೆಗಳು ತೂರಿಬಂದಿದ್ದು, ಎಲ್ಲದಕ್ಕೂ ಸಮಾಧಾನವಾಗಿಯೇ ಉತ್ತರ ನೀಡಿದ್ದಾರೆ. ಬಳಿಕ ಅವರಿಗೆ ಪ್ರಶ್ನೆಯೊಂದು ಎದುರಾಗಿದ್ದು, ಇದಕ್ಕೆ ಖಾರವಾಗಿಯೇ ಉತ್ತರಿಸಿ, ಪ್ರಶ್ನೆ ಕೇಳಿದ ಪತ್ರಕರ್ತ ಕ್ಷಮೆ ಕೇಳುವಂತೆ ಮಾಡಿದ ಘಟನೆ ನಡೆದಿದೆ. ರಾಷ್ಟ್ರೀಯ ವಾಹಿನಿಯೊಂದರಲ್ಲಿ ಸಂದರ್ಶಿಸುತ್ತಿದ್ದ ಪತ್ರಕರ್ತ, ಸಾನಿಯಾ ಅವರಿಗೆ, ನೀವು ಯಾವಾಗ ಸೆಟ್ಲ್ ಆಗ್ತೀರಿ, ಯಾವಾಗ ತಾಯಿ ಆಗ್ತೀರಿ ಎಂದೆಲ್ಲಾ ಪ್ರಶ್ನಿಸಿದ್ದು, ಈ ಬಗ್ಗೆ ಆತ್ಮಕಥನದಲ್ಲಿ ಹೇಳಿಲ್ಲ ಎಂದು ಕೇಳಿದ್ದಾರೆ.

ಇದಕ್ಕೆ ಗರಂ ಆದ ಸಾನಿಯಾ ಮಿರ್ಜಾ, ಕ್ರೀಡೆಯಲ್ಲಿ ಸಾಧನೆ ಮಾಡಿದ್ದು, ನಿಮಗೆ ಕಾಣಿಸುತ್ತಿಲ್ಲವೇ? ಅನೇಕ ಪ್ರಶಸ್ತಿಗಳನ್ನು ಗೆದ್ದಿರುವುದು ಗೊತ್ತಿಲ್ಲವೇ? ಡಬಲ್ಸ್ ನಲ್ಲಿ ನಂಬರ್ ಒನ್ ಆಟಗಾರ್ತಿಯಾಗಿದ್ದರೂ, ತಾಯ್ತನದ ಆಯ್ಕೆ ಬಗ್ಗೆ ಕೇಳುತ್ತಿರುವುದು ನಿಮ್ಮ ಪ್ರಶ್ನೆಯಲ್ಲಿಯೇ ನಿರಾಸೆಯ ಭಾವ ಕಾಣುತ್ತದೆ. ಇನ್ನು ನಾನು ಸೆಟ್ಲ್ ಆಗಿಲ್ಲವೆಂದು ಯಾರು ಹೇಳಿದ್ದು? ಎಂದೆಲ್ಲಾ ಸಾನಿಯಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಜೊತೆಗೆ ಸಮಾಧಾನದಿಂದಲೇ ಉತ್ತರಿಸಿ, ನಾನು ಮುಂದಿನ ದಿನಗಳಲ್ಲಿ ಸೆಟ್ಲ್ ಆಗಿ, ತಾಯಿಯಾಗುವ ಸಂದರ್ಭದಲ್ಲಿ ನಿಮಗೇ ಮೊದಲು ತಿಳಿಸುತ್ತೇನೆ ಎಂದು ಹೇಳಿದ್ದು, ಅವರನ್ನು ಪ್ರಶ್ನಿಸಿದ ಪತ್ರಕರ್ತ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಪತ್ರಕರ್ತ ಕೂಡ ಸಾನಿಯಾರಲ್ಲಿ ಕ್ಷಮೆಯಾಚಿಸಿ, ಪ್ರಶ್ನಾವಳಿ ಸರಿ ಇರಲಿಲ್ಲ. ಇನ್ನುಮುಂದೆ ಇಂತಹ ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...