alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ತಡೇ ಗರ್ಲ್ ಸಾನಿಯಾಗೆ ಪತಿಯಿಂದ ಪ್ರೇಮ ಸಂದೇಶ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರೋ ಮೂಗುತಿ ಸುಂದರಿಗೆ ಸ್ಪೆಷಲ್ಲಾಗಿ ವಿಶ್ ಮಾಡಿದವರು ಪತಿ ಶೋಯೆಬ್ ಮಲಿಕ್. ಪಾಕ್ ಕ್ರಿಕೆಟಿಗ ಮಲಿಕ್, ತಮ್ಮ ಪತ್ನಿಗೆ ಮಾಡಿರೋ ಟ್ವೀಟ್ ವೈರಲ್ ಆಗಿದೆ.

ಬರ್ತಡೇ ಶುಭಾಶಯದ ಜೊತೆಗೆ ತಾನು ನಿನ್ನನ್ನು ಮಿಸ್ ಮಾಡಿಕೊಳ್ತಿದ್ದೇನೆ ಅಂತಾನೂ ಶೋಯೆಬ್ ಟ್ವೀಟ್ ಮಾಡಿದ್ದಾರೆ. 2010ರಲ್ಲಿ ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್ ರನ್ನು ಮದುವೆಯಾಗಿದ್ದರು. 6 ವರ್ಷದವರಿದ್ದಾಗ್ಲೇ ಟೆನಿಸ್ ಆಡಲು ಆರಂಭಿಸಿದ್ದ ಸಾನಿಯಾ, ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಪದ್ಮಶ್ರೀ, ಪದ್ಮಭೂಷಣ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳು ಕೂಡ ಸಾನಿಯಾರನ್ನು ಅರಸಿ ಬಂದಿವೆ. ಡಬಲ್ಸ್ ರ್ಯಾಂಕಿಂಗ್ ನಲ್ಲಿ ಇತ್ತೀಚೆಗಷ್ಟೆ ಸಾನಿಯಾ ನಂಬರ್ ವನ್ ಸ್ಥಾನಕ್ಕೂ ಏರಿದ್ದರು. ಸದ್ಯ ಮಂಡಿ ನೋವಿನಿಂದ ಬಳಲುತ್ತಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...