alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಕಿತ್ತಾಡಿಕೊಂಡ ಸಾನಿಯಾ-ಮಲ್ಲಿಕ್..!

ಅಕ್ಟೋಬರ್ 29ರಂದು ನಾಲ್ಕು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿವೆ. ಭಾರತ-ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯವಾಡಿದ್ರೆ ಅತ್ತ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಟಿ-20 ಪಂದ್ಯವನ್ನಾಡಿದೆ. ಶ್ರೀಲಂಕಾ ವಿರುದ್ಧ ಉತ್ತಮ ಆಟ ಪ್ರದರ್ಶಿಸಿದ ಪಾಕಿಸ್ತಾನ 3-0ನಿಂದ ಸರಣಿ ತನ್ನದಾಗಿಸಿಕೊಂಡಿದೆ.

ಪಾಕ್-ಶ್ರೀಲಂಕಾ ನಡುವೆ ನಡೆದ 20-20 ಸರಣಿಯಲ್ಲಿ ಶೋಯೆಬ್ ಮಲ್ಲಿಕ್ ಉತ್ತಮ ಆಟವಾಡಿದ್ದಾರೆ. ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಮ್ಯಾನ್ ಆಫ್ ದಿ ಸಿರೀಸ್ ತಮ್ಮದಾಗಿಸಿಕೊಂಡಿದ್ದಾರೆ. ಶೋಯೆಬ್ ಮಲ್ಲಿಕ್ ಗೆ ಪ್ರಶಸ್ತಿ ರೂಪದಲ್ಲಿ ಬೈಕ್ ನೀಡಲಾಗಿದೆ. ಬೈಕ್ ಫೋಟೋ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ ಮಲ್ಲಿಕ್. ಇದನ್ನು ನೋಡಿದ ಪತ್ನಿ ಹಾಗೂ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಒಂದು ರೌಂಡ್ ಹೋಗೋಣ್ವಾ ಎಂದು ಕೇಳಿದ್ದಾರೆ.

ಬೇಗ ಬಾ ಎನ್ನುತ್ತಲೇ ಇನ್ನೊಂದು ಫೋಟೋ ಹಾಕಿದ್ದಾರೆ ಮಲ್ಲಿಕ್. ಅದ್ರಲ್ಲಿ ಶೋಯೆಬ್ ಹಿಂದೆ ಶದಾಬ್ ಖಾನ್ ಕುಳಿತಿದ್ದಾರೆ. ಇದನ್ನು ನೋಡಿ ಪತಿ  ಮೇಲೆ ತಮ್ಮ ಹುಸಿ ಮುನಿಸು ತೋರಿದ್ದಾರೆ ಸಾನಿಯಾ. ನನ್ನ ಜಾಗದಲ್ಲಿ ಮತ್ತ್ಯಾರೋ ಕುಳಿತುಕೊಂಡಿದ್ದಾರೆಂದು ಸಾನಿಯಾ ಹೇಳಿದ್ದಾರೆ. ಮಲ್ಲಿಕ್ ಹಾಗೂ ಶದಾಬ್, ಸಾಮಾಜಿಕ ಜಾಲತಾಣದಲ್ಲಿಯೇ ಸಾನಿಯಾ ಕೋಪ ತಣಿಸುವ ಯತ್ನ ಮಾಡಿದ್ದಾರೆ. ಶದಾಬ್ ಕ್ಷಮೆ ಕೂಡ ಕೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...