alex Certify
ಕನ್ನಡ ದುನಿಯಾ       Mobile App
       

Kannada Duniya

ನೋವಿನ ದಿನಗಳನ್ನು ಎಲ್ಲರ ಮುಂದಿಟ್ಟ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೆನಿಸ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಸಾನಿಯಾ ತಮ್ಮ ಹಿಂದಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ಮುಂಬೈನಲ್ಲಿ ನಡೆದ ಮುಜೆ ಹಕ್ ಹೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾನಿಯಾ ಆರಂಭದ ದಿನಗಳಲ್ಲಿ ಏನೆಲ್ಲ ಮಾತುಗಳನ್ನು ಕೇಳಬೇಕಾಯ್ತು ಎಂಬುದನ್ನು ಹೇಳಿದ್ದಾರೆ.

ಸಾನಿಯಾ 6ನೇ ವರ್ಷದಲ್ಲಿಯೇ ಟೆನಿಸ್ ಕಲಿಯಲು ಶುರು ಮಾಡಿದ್ದರಂತೆ. ಟೆನಿಸ್ ಕೋರ್ಟಿಗೆ ಹೋಗ್ತಿರುವುದು ಗೊತ್ತಾಗುತ್ತಿದ್ದಂತೆ ತಂದೆ-ತಾಯಿಗೆ ಸಾನಿಯಾ ಅಂಕಲ್ –ಆಂಟಿ ಟೆನಿಸ್ ಬೇಡ ಎನ್ನುವ ಸಲಹೆ ನೀಡಿದ್ದರಂತೆ. ಮಗಳು ಕಪ್ಪಗಾಗ್ತಾಳೆ. ಯಾರೂ ಮದುವೆಯಾಗುವುದಿಲ್ಲ ಎಂದಿದ್ದರಂತೆ.

ನನ್ನ ಜೀವನದಲ್ಲಿ ನನ್ನ ತಂದೆ ನನಗೆ ದೊಡ್ಡ ಹಿರೋ ಎಂದಿರುವ ಸಾನಿಯಾ ಎಲ್ಲರನ್ನು ಎದುರಿಸಿ ತಂದೆ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಟೆನಿಸ್ ನಲ್ಲಿ ನಿನ್ನ ಮಗಳು ಮಾರ್ಟಿನಾ ಹಿಂಗಿಸ್ ಆಗ್ತಾಳಾ ಎಂದು ಕೆಲವರು ವ್ಯಂಗ್ಯವಾಡಿದ್ದರಂತೆ. ಮಾರ್ಟಿನ್ ಹಿಂಗಿಸ್ ವಿರುದ್ಧವೇ ಆಡಿ ಮೂರು ಪ್ರಶಸ್ತಿ ಗೆದ್ದುಕೊಂಡಿದ್ದೇನೆ. ಇದು ನನಗೆ ಹೆಮ್ಮೆ ವಿಚಾರವೆಂದು ಸಾನಿಯಾ ಹೇಳಿದ್ದಾರೆ.

ಈಗ್ಲೂ ಆಟದಲ್ಲಿ ಹೆಣ್ಣು-ಗಂಡೆಂಬ ಬೇಧವಿದೆ. ಈಗ್ಲೂ ಆಟಗಾರ್ತಿಯರು ಆಟಗಾರರಿಗೆ ಸಮನಾಗಿ ಪ್ರಶಸ್ತಿ ಮೊತ್ತ ಪಡೆಯಲು ಸಾಧ್ಯವಾಗ್ತಿಲ್ಲ. ಹೆಣ್ಣು-ಗಂಡೆಂಬ ಅಸಮಾನತೆ ಎಲ್ಲೆಡೆ ಇದೆ ಎಂದು ಸಾನಿಯಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...