alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಬಿ ಬಂಪ್ ಜೊತೆ ಕವರ್ ಪೇಜ್ ನಲ್ಲಿ ಸಾನಿಯಾ ಮಿರ್ಜಾ

ಪ್ರಸಿದ್ಧ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪತಿ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಮೊದಲ ಮಗುವಿನ ಬರುವಿಕೆಗೆ ಕಾಯ್ತಿದ್ದಾರೆ. ಸಾನಿಯಾ ಮಿರ್ಜಾ ಬೇಬಿ ಬಂಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಸಾನಿಯಾ ಬೇಬಿ ಬಂಪ್ ಜೊತೆ ನಿಯತಕಾಲಿಕೆಯ ಮುಖಪುಟದಲ್ಲಿ ಮಿಂಚಿದ್ದಾರೆ.

ಜೆಎಫ್ಡಬ್ಲ್ಯೂ ನಿಯತಕಾಲಿಕೆಗಾಗಿ ಸಾನಿಯಾ ಮಿರ್ಜಾ ಬೇಬಿ ಬಂಪ್ ಜೊತೆ ಫೋಟೋ ಶೂಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸಾನಿಯಾ ಮಿರ್ಜಾ ಕಾಣಿಸಿಕೊಂಡಿದ್ದರು. ಹೆರಿಗೆ ನಂತ್ರ ಟೆನಿಸ್ ಕೋರ್ಟ್ ಗೆ ಬರುವುದು ಸಾನಿಯಾರ ಮೊದಲ ಆದ್ಯತೆಯಂತೆ.

2020 ರಲ್ಲಿ ನಡೆಯುವ ಟೋಕಿಯೊ ಒಲಂಪಿಕ್ಸ್ ನಲ್ಲಿ ಸಾನಿಯಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಸಾನಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ ಬಗ್ಗೆ ಮಾತನಾಡಲು ಇನ್ನೂ ಸಮಯವಿದೆ ಎಂದಿದ್ದಾರೆ. ಮೊಣಕಾಲು ಗಾಯದಿಂದ ಬಳಲುತ್ತಿದ್ದ ಸಾನಿಯಾ ಅಕ್ಟೋಬರ್ ನಂತ್ರ ಮೈದಾನಕ್ಕಿಳಿದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...