alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೋಲ್‌ ಹುಡುಗರಿಗೆ ಸರಿಯಾದ ಉತ್ತರ ಕೊಟ್ಟ ಸಾನಿಯಾ

ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ದಿನ ಭಾರತೀಯ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಟ್ರೋಲ್‌ ಹುಡುಗರು ಶುಭಾಶಯ ಕೋರಿದ್ದಾರೆ. ಇದಕ್ಕೆ ಸಾನಿಯಾ ಸಹ ಸರಿಯಾದ ಉತ್ತರವನ್ನೂ ನೀಡಿದ್ದಾರೆ.

ಟ್ವಿಟರ್‌ನಲ್ಲಿ ನಿಮಗೆ ಸ್ವಾತಂತ್ರ್ಯ ದಿನಾಚರಣೆ ಇವತ್ತಲ್ಲವೇ ಎಂಬ ಟ್ವೀಟ್‌ ಪೋಸ್ಟ್‌ಗೆ, ನನಗೆ ಹಾಗೂ ನನ್ನ ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆ ಆ.15 ರಂದು. ನನ್ನ ಪತಿ ಹಾಗೂ ಅವರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆ.14 ರಂದು. ನಿಮ್ಮಲ್ಲಿದ್ದ ಗೊಂದಲ ಇದೀಗ ಪರಿಹಾರವಾಗಿದೆ ಎಂದುಕೊಂಡಿರುವೆ. ಅಂದ ಹಾಗೆ ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಯಾವಾಗ ? ನಿಮ್ಮಲ್ಲಿ ಸಾಕಷ್ಟು ಗೊಂದಲ ಕಾಣುತ್ತಿದೆಯಲ್ಲ ಎಂದು ಸಾನಿಯಾ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.

ಟೆನಿಸ್‌ನ ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ವಿಶ್ವದ ನಂ.1 ಆಟಗಾರ್ತಿಯಾಗಿದ್ದರು. 2010 ರಲ್ಲಿ ಅವರು ಪಾಕ್‌ ಕ್ರಿಕೆಟಿಗ ಶೊಯಬ್‌ ಮಲ್ಲಿಕ್‌ನ್ನು ವಿವಾಹವಾದ ಬಳಿಕ ಸಾಕಷ್ಟು ಇಂತಹ ಪ್ರಶ್ನೆಗಳನ್ನು ಎದುರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...