alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ಬಾಲ್ ಪಂದ್ಯದ ಟಿಕೆಟ್ ಕೇಳಿ ಟ್ರೋಲ್ ಆದ ಸಾನಿಯಾ

ಹೀರೋ ಇಂಟರ್ಕಾಂಟಿನೆಂಟಲ್ ಕಪ್ ನಲ್ಲಿ ಪಾಲ್ಗೊಂಡಿರುವ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಪಂದ್ಯವನ್ನು ಮೈದಾನಕ್ಕೆ ಬಂದು ವೀಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಟ್ವೀಟರ್ ನಲ್ಲಿ ವಿಡಿಯೋ ಹಾಕಿರುವ ಸುನಿಲ್, ಮೈದಾನಕ್ಕೆ ಬಂದು ಪಂದ್ಯ ನೋಡಿ ಆಟಗಾರರಿಗೆ ಪ್ರೋತ್ಸಾಹ ನೀಡಿ ಎಂದಿದ್ದಾರೆ.

ಚೀನಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 3-0 ಅಂತರದಲ್ಲಿ ಗೆಲುವು ಸಾಧಿಸಿದ ತಂಡದ ನಾಯಕ ಮೈದಾನದಲ್ಲಿದ್ದ ಜನರನ್ನು ನೋಡಿ ಬೇಸರಗೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ 2569 ಪ್ರೇಕ್ಷಕರು ಮಾತ್ರ ಉಪಸ್ಥಿತರಿದ್ದರು. ಹಾಗಾಗಿ ಚೆಟ್ರಿ ಮೈದಾನಕ್ಕೆ ಬರುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಆಟಗಾರರು ಬೆಂಬಲ ನೀಡಿದ್ದಾರೆ. ಇವ್ರಲ್ಲಿ ಸಾನಿಯಾ ಮಿರ್ಜಾ ಹೆಸ್ರು ಕೂಡ ಕೇಳಿ ಬಂದಿದೆ.

ಸುನಿಲ್ ಚೆಟ್ರಿ ವಿಡಿಯೋಕ್ಕೆ ಸಾನಿಯಾ ಮಾಡಿರುವ ಕಮೆಂಟ್ ಟ್ರೋಲ್ ಆಗಿದೆ. ಸಾನಿಯಾ ನನಗೆ ಟಿಕೆಟ್ ಸಿಗಬಹುದಾ ಪ್ಲೀಸ್ ಎಂದು ಕಮೆಂಟ್ ಮಾಡಿದ್ದಾರೆ. ಸಾನಿಯಾ ಕಮೆಂಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಣ ನೀಡಿ ಟಿಕೆಟ್ ಖರೀದಿ ಮಾಡಿ. ಇಲ್ಲ ಆನ್ಲೈನ್ ನಲ್ಲಿ ಬುಕ್ ಮಾಡಿ ಅಂತಾ ಅಭಿಮಾನಿಗಳು ಸಲಹೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...