alex Certify
ಕನ್ನಡ ದುನಿಯಾ       Mobile App
       

Kannada Duniya

ಫೈನಲ್ ಗೂ ಮುನ್ನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸಾನಿಯಾ

555_1497683920_749x421

ಎಲ್ಲರ ಕಣ್ಣು ಸದ್ಯ ಭಾರತ-ಪಾಕಿಸ್ತಾನ ಪಂದ್ಯದ ಮೇಲಿದೆ. ಭಾನುವಾರ ಇಂಗ್ಲೆಂಡ್ ನಲ್ಲಿ ಭಾರತ-ಪಾಕ್ ತಂಡಗಳು ಸೆಣೆಸಾಡಲಿವೆ. ಭಾರತೀಯ ಅಭಿಮಾನಿಗಳು ಪಂದ್ಯಕ್ಕಿಂತ ಮೊದಲೇ ಗೆಲುವು ನಮ್ಮದು ಎನ್ನುತ್ತಿದ್ದಾರೆ. ಈ ಮಧ್ಯೆ ಎಂದಿನಂತೆ ಭಾರತದ ಟೆನ್ನಿಸ್ ಆಟಗಾರ್ತಿ ಹಾಗೂ ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ವಾದ-ವಿವಾದಗಳಿಗೆ ಬಲಿಪಶುವಾಗ್ತಿದ್ದಾರೆ.

ಸಾನಿಯಾ ಮಿರ್ಜಾ ಈಗ ಏನು ಮಾಡಿದ್ರೂ ತಪ್ಪು. ಇದು ಹೊಸದಲ್ಲ. ಭಾರತ-ಪಾಕ್ ಕ್ರಿಕೆಟ್ ಪಂದ್ಯ ನಡೆದಾಗೆಲ್ಲ ಸಾನಿಯಾ ಚರ್ಚೆಯ ವಿಷಯವಾಗ್ತಾರೆ. ಈಗ ಕೂಡ ಸಾನಿಯಾ ಕಾಲೆಳೆಯುವ ಪ್ರಯತ್ನ ನಡೆದಿದೆ. ಭಾರತ-ಪಾಕ್ ಕ್ರಿಕೆಟ್ ಯುದ್ಧವಲ್ಲ. ಅದೊಂದು ಆಟ. ಆಟವಾಗಿ ಸ್ವೀಕರಿಸಿ ಎಂದು ಸಾನಿಯಾ ಟ್ವಿಟ್ ಮಾಡಿದ್ದರು. ಈ ಬಗ್ಗೆ ಭಾರತೀಯರು ಸಾಕಷ್ಟು ವಿರೋಧಿ ಕಮೆಂಟ್ ಮಾಡಿದ್ದರು.

ಈಗ ಸಾನಿಯಾ ಮಿರ್ಜಾ ನಕಲಿ ಯುವರಾಜ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಯುವರಾಜ್ ಸಿಂಗ್ ಹೋಲುವ ವ್ಯಕ್ತಿಯ ಫೋಟೋವನ್ನು ಬಿಸಿಸಿಐ ಪೋಸ್ಟ್ ಮಾಡಿತ್ತು. ಅದೇ ಫೋಟೋವನ್ನು ಸಾನಿಯಾ ಪೋಸ್ಟ್ ಮಾಡಿ ಇಬ್ಬರೂ ಒಂದೇ ರೀತಿ ಇದ್ದಾರೆಂದು ಕಮೆಂಟ್ ಹಾಕಿದ್ದರು. ಆದ್ರೆ ಸಾನಿಯಾ ಈ ಹೇಳಿಕೆಗೆ ಬೇರೆ ಬೇರೆ ರೀತಿ ಕಮೆಂಟ್ ಬರ್ತಾ ಇದೆ. ಇದು ಪಾಕಿಸ್ತಾನದ ಕುಮ್ಮಕ್ಕು ಅಂತಾ ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಸಾನಿಯಾ ಯಾರಿಗೆ ಬೆಂಬಲ ನೀಡ್ತಾರೆ ಎಂದು ಕೇಳಿದ್ದಾರೆ. ಮತ್ತೆ ಕೆಲವರು ಸಾನಿಯಾ ಪಾಕಿಸ್ತಾನದ ಸೊಸೆ. ಪಾಕಿಸ್ತಾನದ ಪರ ಟೆನ್ನಿಸ್ ಆಡಲಿ. ಭಾರತದಲ್ಲಿ ಸಾಕಷ್ಟು ಆಟಗಾರರಿದ್ದಾರೆಂದು ಕಮೆಂಟ್ ಹಾಕಿದ್ದಾರೆ.

ಈ ಹಿಂದೆ ಕೂಡ ಇಂತ ಕಮೆಂಟ್ ಬಂದಿತ್ತು. ಚಾನೆಲ್ ಒಂದರಲ್ಲಿ ಸಾನಿಯಾ ಮಿರ್ಜಾ ಆಗ ಕಣ್ಣೀರಿಟ್ಟಿದ್ದರು. ನಾನು ಪಾಕಿಸ್ತಾನದ ಸೊಸೆ ನಿಜ. ಆದ್ರೆ ನಾನು ಭಾರತೀಯಳು. ನನ್ನ ನಿಷ್ಠೆ ಭಾರತದ ಮೇಲೆ ಎಂದಿದ್ದರು. ಈಗ ಮತ್ತೆ ನಾನು ಯಾರು ಎಂದು ಸ್ಪಷ್ಟನೆ ನೀಡುವ ಕಾಲ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...