alex Certify
ಕನ್ನಡ ದುನಿಯಾ       Mobile App
       

Kannada Duniya

ದಿಗ್ಗಜ ಆಟಗಾರನಿಗೆ ಇದೆಂಥಾ ಸ್ಥಿತಿ…!

ಶ್ರೀಲಂಕಾದ ಮಾಜಿ ಕ್ರಿಕೆಟರ್ ಸನತ್ ಜಯಸೂರ್ಯ ಅಭಿಮಾನಿಗಳಿಗೊಂದು ನೋವಿನ ಸುದ್ದಿ. ಬ್ಯಾಟಿಂಗ್ ಹಾಗೂ ಆಲ್ ರೌಂಡರ್ ಆಟದ ಮೂಲಕ ಸಹಸ್ರ ಅಭಿಮಾನಿಗಳ ಮನಗೆದ್ದಿರುವ ಜಯಸೂರ್ಯ ಒಂದು ಹೆಜ್ಜೆ ಮುಂದಿಡಲು ಊರುಗೋಲು ಬಳಸುವಂತಾಗಿದೆ.

ಶ್ರೀಲಂಕಾ ಮಾಧ್ಯಮಗಳ ವರದಿ ಪ್ರಕಾರ, ಜಯಸೂರ್ಯ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಹಾಗಾಗಿ ಊರುಗೋಲಿಲ್ಲದೆ ಜಯಸೂರ್ಯ ನಡೆಯೋದು ಕಷ್ಟವಾಗಿದೆ. ಶೀಘ್ರದಲ್ಲಿಯೇ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಜಯಸೂರ್ಯ ಎರಡು ಬಾರಿ ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. 2017ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ಭಾರತದ ವಿರುದ್ಧ ಶ್ರೀಲಂಕಾ ಸೋಲು ಕಂಡ ನಂತ್ರ ಜಯಸೂರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಯಸೂರ್ಯ ಮೆಲ್ಬೋರ್ನ್ ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...