alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್-14 ಕ್ರಿಕೆಟ್ ಸರಣಿಯಲ್ಲಿ ದ್ರಾವಿಡ್ ಪುತ್ರನ ಭರ್ಜರಿ ಆಟ

ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಭಾರತದ ಅಂಡರ್-19 ಕ್ರಿಕೆಟ್ ತಂಡ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಗೆ ಸಜ್ಜಾಗ್ತಿದೆ. ಇನ್ನೊಂದ್ಕಡೆ ದ್ರಾವಿಡ್ ಪುತ್ರ ಸಮಿತ್ ಕೂಡ ಕ್ರಿಕೆಟ್ ಮೈದಾನದಲ್ಲಿ ರನ್ ಮಳೆ ಸುರಿಸುತ್ತಿದ್ದಾನೆ.

ಕೆ ಎಸ್ ಸಿ ಎ ವತಿಯಿಂದ ನಡೆದ 14 ವರ್ಷದೊಳಗಿನವರ ಬಿಟಿಆರ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಸಮಿತ್ ದ್ರಾವಿಡ್ 150 ರನ್ ಬಾರಿಸಿದ್ದಾನೆ. Mally Aditi ಇಂಟರ್ ನ್ಯಾಶನಲ್ ಸ್ಕೂಲ್ ಪರವಾಗಿ ಸಮಿತ್ ಆಡಿದ್ದಾನೆ. ಸಮಿತ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ತಂಡ ವಿವೇಕಾನಂದ ಸ್ಕೂಲ್ ವಿರುದ್ಧ ಗೆಲುವು ಸಾಧಿಸಿದೆ.

ಆದ್ರೆ ಈ ಪಂದ್ಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ್ದು ಸಮಿತ್ ದ್ರಾವಿಡ್ ಅಲ್ಲ. ಸುನಿಲ್ ಜೋಷಿ ಪುತ್ರ ಆರ್ಯನ್ ಜೋಷಿ. ಬೌಲರ್ ಗಳ ಬೆಂಡೆತ್ತಿದ ಆರ್ಯನ್ 154 ರನ್ ಗಳಿಸಿದ್ದಾನೆ. ಸಮಿತ್ ಮತ್ತು ಆರ್ಯನ್ ಶತಕದ ನೆರವಿನಿಂದ ತಂಡ 500 ರನ್ ಗಳಿಸಿತ್ತು.

ಆದ್ರೆ ವಿವೇಕಾನಂದ ಸ್ಕೂಲ್ ತಂಡ ಕೇವಲ 88 ರನ್ ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿದೆ. ಈ ಹಿಂದೆ ಕೂಡ ಹಲವು ಬಾರಿ ಶಾಲಾ ಮಟ್ಟದ ಕ್ರಿಕೆಟ್ ಸರಣಿಗಳಲ್ಲಿ ದ್ರಾವಿಡ್ ಪುತ್ರ ಮಿಂಚಿದ್ದಾನೆ. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಗಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...