alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವಾ ಹುಟ್ಟಿದ ವೇಳೆ ಧೋನಿಗಲ್ಲ ಇವ್ರಿಗೆ ಫೋನ್ ಮಾಡಿದ್ರು ಸಾಕ್ಷಿ

ಜೀವಾ ಹಾಗೂ ಸಾಕ್ಷಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎರಡು ಕಣ್ಣುಗಳು. ಧೋನಿ ಪತ್ನಿ ಹಾಗೂ ಮಗಳನ್ನು ಸಿಕ್ಕಾಪಟ್ಟೆ ಪ್ರೀತಿ ಮಾಡ್ತಾರೆ. ಮಗಳು ಹಾಗೂ ಪತ್ನಿ ಜೊತೆಗಿರುವ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಕ್ಕೆ ಹಾಕ್ತಿರುತ್ತಾರೆ. ಭಾರತದ ಕ್ರಿಕೆಟ್ ಆಟಗಾರರ ಜೊತೆ ಧೋನಿ ಅಭಿಮಾನಿಗಳು ಜೀವಾ ಅಭಿಮಾನಿಗಳಾಗಿದ್ದಾರೆ.

ಜೀವಾ ಹುಟ್ಟಿದ್ದು 2015 ಫೆಬ್ರವರಿ 6ರಂದು. ಜೀವಾ ಹುಟ್ಟುತ್ತಿದ್ದಂತೆ ಪತ್ನಿ ಸಾಕ್ಷಿ ಧೋನಿಗೆ ಫೋನ್ ಮಾಡಿ ಖುಷಿ ಸುದ್ದಿ ಹೇಳಲಿಲ್ಲ. ಈ ಸುದ್ದಿ ಮೊದಲು ಬಿದ್ದಿದ್ದು ಸುರೇಶ್ ರೈನಾ ಕಿವಿಗೆ. ಅದ್ಯಾಕೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಜೀವಾ ಹುಟ್ಟಿದ ಸಂದರ್ಭದಲ್ಲಿ  ಮಹೇಂದ್ರ ಸಿಂಗ್ ಧೋನಿ ಸಾಕ್ಷಿ ಜೊತೆಗಿರಲಿಲ್ಲ. ಇದು ಎಲ್ಲರಿಗೂ ತಿಳಿದ ವಿಚಾರ. 2015ರಲ್ಲಿ ನಡೆಯಲಿದ್ದ ವಿಶ್ವಕಪ್ ತಯಾರಿ ಮಾಡ್ತಿದ್ದರು ಧೋನಿ. ವಿಶ್ವಕಪ್ ತಯಾರಿಯಲ್ಲಿ ತಲ್ಲೀನರಾಗಿದ್ದ ಧೋನಿ ಕೆಲಸಕ್ಕೆ ಅಡ್ಡಿಯಾಗದಿರಲೆಂದು ಫೋನ್ ಇಟ್ಟುಕೊಳ್ಳುತ್ತಿರಲಿಲ್ಲ. ಇದೇ ಕಾರಣಕ್ಕೆ ಸಾಕ್ಷಿ ಸುರೇಶ್ ರೈನಾರಿಗೆ ಫೋನ್ ಮಾಡಿದ್ದರು. ಸುರೇಶ್ ರೈನಾ ಈ ಖುಷಿ ಸುದ್ದಿಯನ್ನು ಧೋನಿಗೆ ಹೇಳಿದ್ರು.

ಈ ವಿಷ್ಯವನ್ನು ರಾಜ್ದೀಪ್ ಸರ್ದೇಸಾಯಿ ಬರೆದ Democracy’s XI: The Great Indian Cricket Story’ ಪುಸ್ತಕದಲ್ಲಿ ಹೇಳಿದ್ದಾರೆ. ಜೊತೆಗೆ ಈ ವಿಷ್ಯವನ್ನು ಅವರು ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...