alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ತಾಣದಲ್ಲಿ ಸದ್ದು ಮಾಡ್ತಿದೆ ಧೋನಿ ಪತ್ನಿ ಹಾಕಿದ ಈ ಫೋಟೋ

ಟೀಮ್ ಇಂಡಿಯಾ ಇಂಗ್ಲೆಂಡ್ ನಲ್ಲಿ ನಾಲ್ಕನೇ ಟೆಸ್ಟ್ ಆಡ್ತಾ ಇದ್ದರೆ, ಇತ್ತ ಮಹೇಂದ್ರ ಸಿಂಗ್ ಧೋನಿ, ಸದ್ಯ ರಜೆಯ ಮಜೆಯಲ್ಲಿದ್ದಾರೆ. ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಮಾಹಿ, ಸಖತ್ ಎಂಜಾಯ್ ಮಾಡ್ತಿದ್ದಾರೆ.

ಧೋನಿ ಹಾಗೂ ಸಾಕ್ಷಿ ವಿಮಾನದಲ್ಲಿ ಶಿಮ್ಲಾಕ್ಕೆ ಹೋಗುವಾಗ ನಡೆದ ಇಂಟ್ರಸ್ಟಿಂಗ್ ಮಾಹಿತಿಯನ್ನು ಮಾಹಿ ಪತ್ನಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಕ್ಷಿ ಟ್ವಿಟರ್ ನಲ್ಲಿ ಹಾಕಿದ ಈ ಫೋಟೋ ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಶಿಮ್ಲಾಕ್ಕೆ ಹೋಗುವಾಗ ವಿಮಾನದಲ್ಲಿ ಇಬ್ಬರು ಪೈಲೆಟ್ ಇದ್ದರು. ಆ ಇಬ್ಬರೂ ಪೈಲೆಟ್ಸ್ ದಂಪತಿ. ಇದನ್ನು ಅರಿತ ಸಾಕ್ಷಿ, ದಂಪತಿ ವಿಮಾನ ಚಾಲನೆ ಮಾಡುತ್ತಿದ್ದಾರೆ. ಹಾರಾಟದ ಮಧ್ಯೆ ಈ ಇಬ್ಬರ ನಡುವೆ ಜಗಳ ಆಗದೇ ಇದ್ರೆ ಸಾಕು. ಅಂದ ಹಾಗೆ ಈ ದಿನ ವಿಮಾನ ನಡೆಸುವ ಹೊಣೆ ಪತ್ನಿಯದ್ದಾಗಿದೆ. ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಸಾಮಾಜಿಕ ತಾಣದಲ್ಲಿ ಸಖತ್ ಕಮೆಂಟ್ ಸಿಕ್ಕಿವೆ. ಈ ಫೋಟೋ ಹಾಕಿದ ಎರಡೇ ಗಂಟೆಯಲ್ಲಿ 1.2 ಲಕ್ಷ ಜನ ನೋಡಿದ್ದು, 37 ಸಾವಿರ ಜನ ಲೈಕ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...