alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಆಟಗಾರನ ಕೈ ಹಿಡಿಯಲಿದ್ದಾರೆ ಸೈನಾ ನೆಹ್ವಾಲ್

ಭಾರತ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಇಬ್ಬರು ಆಟಗಾರರು ಪ್ರಸಿದ್ಧಿ ಪಡೆದಿದ್ದಾರೆ. ಒಂದು ಸೈನಾ ನೆಹ್ವಾಲ್ ಆದ್ರೆ ಇನ್ನೊಬ್ಬರು ಪರುಪಳ್ಳಿ ಕಶ್ಯಪ್. ಪ್ರಸಿದ್ಧ ಆಟಗಾರರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸೈನಾ ಇದೇ ಡಿಸೆಂಬರ್ 16ರಂದು ಕಶ್ಯಪ್ ಕೈ ಹಿಡಿಯಲಿದ್ದಾರೆ.

ಮದುವೆ ಸಮಾರಂಭ ಸರಳವಾಗಿ ನಡೆಯಲಿದೆ. ಸ್ನೇಹಿತರು, ಸಂಬಂಧಿಕರು ಸೇರಿ 100 ಮಂದಿ ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಸಮಾರಂಭದ ಐದು ದಿನಗಳ ನಂತ್ರ ಅಂದ್ರೆ ಡಿಸೆಂಬರ್ 21ರಂದು ಅದ್ಧೂರಿ ಪಾರ್ಟಿ ನೀಡಲು ನಿರ್ಧರಿಸಲಾಗಿದೆ.

ಮದುವೆಗೆ ಎರಡೂ ಕುಟುಂಬಗಳಿಂದ ತಯಾರಿ ಜೋರಾಗಿ ನಡೆದಿದೆ. ಬಹುತೇಕ ಡಿಸೆಂಬರ್ 16ರಂದೇ ಮದುವೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಅನೇಕ ವರ್ಷಗಳ ಹಿಂದೆಯೇ ಸೈನಾ ಹಾಗೂ ಕಶ್ಯಪ್ ಮಧ್ಯೆ ಪ್ರೀತಿ ಚಿಗುರಿತ್ತು. ಆದ್ರೆ ಸಮಾಜದ ಮುಂದೆ ಉತ್ತಮ ಸ್ನೇಹಿತರಂತೆ ಕಾಣಿಸಿಕೊಂಡಿದ್ದರು. 2005ರಲ್ಲಿ ಟ್ರೇನಿಂಗ್ ವೇಳೆ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...