alex Certify
ಕನ್ನಡ ದುನಿಯಾ       Mobile App
       

Kannada Duniya

ಸೈನಾ ಬಯೋಪಿಕ್ ನಲ್ಲಿ ಶ್ರದ್ಧಾ ಬದಲು ಈ ನಟಿಗೆ ಚಾನ್ಸ್?

2017 ನಟಿ ಶ್ರದ್ಧಾ ಕಪೂರ್ ಗೆ ಕಹಿ ಅನುಭವಗಳನ್ನೇ ನೀಡಿದೆ. ಶ್ರದ್ಧಾ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹಸೀನಾ ಪಾರ್ಕರ್ ಚಿತ್ರ ತೋಪೆದ್ದಿತ್ತು. ಆಶಿಕಿ 2ನ ಯಶಸ್ವಿ ಜೋಡಿ ಆದಿತ್ಯ ರಾಯ್ ಕಪೂರ್ ಹಾಗೂ ಶ್ರದ್ಧಾ ಅಭಿನಯದ ಓಕೆ ಜಾನು ಕೂಡ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲೇ ಇಲ್ಲ.

2018ರ ಆರಂಭದಲ್ಲೇ ಶ್ರದ್ಧಾಗೆ ಮತ್ತೊಂದು ಬ್ಯಾಡ್ ನ್ಯೂಸ್ ಸಿಕ್ಕಿದೆ. ಶ್ರದ್ಧಾ ನಟಿಸಬೇಕಾಗಿದ್ದ ಸೈನಾ ನೆಹ್ವಾಲ್ ಬಯೋಪಿಕ್ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ. ಅನಿರ್ಧಿಷ್ಟಾವಧಿಗೆ ಚಿತ್ರವನ್ನು ಮುಂದೂಡಿರೋದಾಗಿ ನಿರ್ಮಾಪಕರು ತಿಳಿಸಿದ್ದಾರಂತೆ. ಆದ್ರೆ ಇನ್ನೊಂದು ಮೂಲಗಳು ಹೇಳ್ತಿರೋದೇ ಬೇರೆ.

ನಿರ್ಮಾಪಕರು ಶ್ರದ್ಧಾ ಬದಲು ದೀಪಿಕಾಳನ್ನು ಹಾಕಿಕೊಳ್ಳಲು ಚಿಂತನೆ ನಡೆಸಿದ್ದಾರಂತೆ. ದೀಪಿಕಾ ಕೂಡ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ಹಾಗಾಗಿ ಸೈನಾ ಪಾತ್ರಕ್ಕೆ ಸೂಟ್ ಆಗ್ತಾರೆ ಅನ್ನೋದು ನಿರ್ಮಾಪಕರ ನಂಬಿಕೆ. ಶ್ರದ್ಧಾಳನ್ನು ರಿಪ್ಲೇಸ್ ಮಾಡೋ ಸಾಧ್ಯತೆ ಇದೆ. ಈ ಚಿತ್ರಕ್ಕಾಗಿ ಶ್ರದ್ಧಾ, ಹೈದ್ರಾಬಾದ್ ನಲ್ಲಿ ಖುದ್ದು ಸೈನಾರಿಂದ ತರಬೇತಿ ಕೂಡ ಪಡೆದಿದ್ದರು.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...