alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ದಾಖಲೆ ಬರೆದ ಸಚಿನ್ ತೆಂಡೂಲ್ಕರ್

Sachin-Tendulkar 2

ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬ ಮಾತಿನಂತೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತರಾದರೂ ದಾಖಲೆಗಳು ನಿಂತಿಲ್ಲ. ಸಚಿನ್ ಇದೀಗ ಮತ್ತೊಂದು ದಾಖಲೆಗೆ ಕಾರಣವಾಗಿದ್ದಾರೆ. ಸಚಿನ್ ಅವರ ಆತ್ಮಚರಿತ್ರೆ ಮಾರಾಟದಲ್ಲಿ ದಾಖಲೆಯನ್ನು ನಿರ್ಮಿಸಿದೆ.

ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರು 2014 ರ ನವೆಂಬರ್ 6 ರಂದು ಬಿಡುಗಡೆಗೊಳಿಸಿದ್ದ ಆತ್ಮಚರಿತ್ರೆ ‘ಪ್ಲೇಯಿಂಗ್ ಇಟ್ ಮೈ ವೇ’ ಲಿಮ್ಕಾ ದಾಖಲೆಗೆ ಸೇರಿದೆ. ಹ್ಯಾಚೆಟೆ ಇಂಡಿಯಾ ಪ್ರಕಟಿಸಿರುವ ಈ ಕೃತಿ ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ವಿಭಾಗದಲ್ಲಿ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ. ಬಿಡುಗಡೆಯಾದಾಗಿನಿಂದ ಸುಮಾರು 1.50 ಲಕ್ಷ ಕೃತಿಗಳು ಮಾರಾಟವಾಗಿವೆ. ಬೋರಿಯಾ ಮಜುಂದಾರ್ ಅವರೊಂದಿಗೆ ಸಚಿನ್ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದು, ಓದುಗರು ಮುಗಿಬಿದ್ದು ಖರೀದಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ‘ಪ್ಲೇಯಿಂಗ್ ಇಟ್ ಮೈ ವೇ’ ಕೃತಿಯ ಬೆಲೆ 899 ರೂಪಾಯಿಗಳು. ಈ ಕೃತಿ ಮಾರಾಟದಲ್ಲಿ ದಾಖಲೆ ಬರೆಯುವ ಜೊತೆಗೆ 13.51 ಕೋಟಿ ರೂಪಾಯಿ ವಹಿವಾಟು ನಡೆಸಿದ್ದು, ಈ ಮೂಲಕ ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ಬರೆದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...